ಚೆನ್ನೈ: ಅಸ್ವಸ್ಥರಾಗಿರುವ ಖ್ಯಾತ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ಸ್ಥಿತಿಯಲ್ಲಿ ಯಥಾಸ್ಥಿತಿ ಮುಂದುವರಿದಿದೆ, ಈಗಲೂ ಆರೋಗ್ಯ ಸ್ಥಿತಿ ಅತ್ಯಂತ ಗಂಭೀರವಾಗಿದೆ. ಕಳೆದ ಒಂದು ವಾರದಿಂದ ಅವರು ನಿಧಾನವಾಗಿ ಚೇತರಿಸುತ್ತಿದ್ದರು. ಆದರೆ ಗುರುವಾರ ದಿಢೀರನೆ ತೀವ್ರ ಅಸ್ವಸ್ಥರಾದರು.
ಇಂದು ಬೆಳಿಗ್ಗೆ ಎಸ್ ಪಿ ಬಿ ಅವರ ಆರೋಗ್ಯ ಸ್ಥಿತಿ ಕುರಿತಂತೆ ಹೆಲ್ತ್ ಬುಲೆಟಿನ್ ಬಿಡುಗಡೆಯಾಗುವ ಸಾಧ್ಯತೆಯಿದೆ.
. ಎಸ್ ಪಿ ಬಿ ಗುಣಮುಖರಾಗಲಿ ಎಂದು ಹಾರೈಸಿ ಲಕ್ಷಾಂತರ ಅಭಿಮಾನಿಗಳು ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದ್ದಾರೆ