ಶಬರಿಮಲೆ: ಪ್ರಸಿದ್ದ ಅಯ್ಯಪ್ಪ ಸ್ವಾಮಿ ದೇವಸ್ಥಾನ ಶಬರಿಮಲೆಯಲ್ಲಿ ನಾಳೆ ಬಾಗಿಲು ಮುಚ್ಚಲಾಗುವುದು. ಇದರೊಂದಿಗೆ ಮಕರ ಜ್ಯೋತಿ ಯಾತ್ರ ಅವಧಿ ಕೊನೆಗೊಳ್ಳಲಿದೆ. ಬಳಿಕ ಪ್ರತಿ ತಿಂಗಳು ಮಲೆಯಾಳಂ ಕ್ಯಾಲೆಂಡರ್ ನ ಮೊದಲ ದಿನ ದೇವಸ್ಥಾನದ ಬಾಗಿಲನ್ನು ದಿನದ ಮಟ್ಟಿಗೆ ತೆರೆಯಲಾಗುತ್ತದೆ. ಈ ಬಾರಿ ದಾಖಲೆ ಸಂಖ್ಯೆಯಲ್ಲಿ ಅಯ್ಯಪ್ಪ ಭಕ್ತರು ಶಬರಿಮಲೆಗೆ ಆಗಮಸಿದ್ದಾರೆ. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ದೇವಸ್ಥಾನ ಮತ್ತು ಪರಿಸರದಲ್ಲಿ ಶಾಂತಿ ನೆಲೆಸಿತ್ತು. ಇದರಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ದೇವಸ್ಥಾನಕ್ಕೇ ಭೇಟಿ ನೀಡಿದ್ದಾರೆ