Wednesday, July 6, 2022

ಸಿಪಿಎಂ ನಾಯಕ ಕೊರೋನಾಗೆ ಬಲಿ

Follow Us

ಕೊಲ್ಕೊತ್ತಾ: ಪಶ್ಚಿಮ ಬಂಗಾಳದ ಸಿಪಿಎಂನ ಹಿರಿಯ ನಾಯಕ, ಸಿಪಿಎಂನ ಕೇಂದ್ರ ಸಮಿತಿಯ ಹಾಲಿ ಸದಸ್ಯ ಶ್ಯಾಮಲ್ ಚಕ್ರವರ್ತಿ (76) ಗುರುವಾರ (ಆ.6) ಕೊರೋನಾಗೆ ಬಲಿಯಾಗಿದ್ದಾರೆ.
ಚಕ್ರವರ್ತಿ ಅವರಿಗೆ ಪುತ್ರಿ ಹಾಗೂ ನಟಿ ಉಶಾಸಿ ಚಕ್ರವರ್ತಿ ಇದ್ದಾರೆ. 1982 ಹಾಗೂ 1996ರ ನಡುವೆ ಮೂರು ಬಾರಿ ಪಶ್ಚಿಮಬಂಗಾಳದ ಸಾರಿಗೆ ಸಚಿವರಾಗಿ ಕಾರ್ಯನಿರ್ವಹಿಸಿದ್ದ ಶ್ಯಾಮಲ್ ಚಕ್ರವರ್ತಿ ಅವರಿಗೆ ಕಳೆದ ತಿಂಗಳ ಅಂತ್ಯದಲ್ಲಿ ಕೊರೋನಾ ಸೋಂಕು ಇರುವುದು ದೃಢಪಟ್ಟಿತ್ತು. ಅವರನ್ನು ಇಲ್ಲಿನ ಪೀಯರ್‌ಲೆಸ್ ಆಸ್ಪತ್ರೆಯಲ್ಲಿ ಜುಲೈ 30ರಂದು ದಾಖಲಿಸಲಾಗಿತ್ತು. ನಂತರ ಆಗಸ್ಟ್ 1ರಂದು ವೆಂಟಿಲೇಟರ್‌ನಲ್ಲಿ ಇರಿಸಲಾಗಿತ್ತು. ಅವರಿಗೆ ಗುರುವಾರ ಬೆಳಗ್ಗೆ ಹೃದಯಾಘಾತ ಸಂಭವಿಸಿತ್ತು. ಅಪರಾಹ್ನ 1.50ಕ್ಕೆ ಮತ್ತೊಮ್ಮೆ ಸಂಭವಿಸಿದ ಹೃದಯಾಘಾತದಿಂದ ಅವರು ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
ಶ್ಯಾಮಲ್ ಚಕ್ರವರ್ತಿ ಅವರು ವ್ಯಾಪಾರಿ ಒಕ್ಕೂಟದ ಹಾಗೂ ಸಿಐಟಿಯು ಕಾರ್ಯಕಾರಿ ಸಮಿತಿ ಸದಸ್ಯರಾಗಿದ್ದರು. ಈ ಹಿಂದೆ ಅವರು ಸಿಪಿಎಂನ ರಾಜ್ಯಸಭಾ ಸದಸ್ಯ, ಸಿಐಟಿಯುನ ರಾಜ್ಯ ವರಿಷ್ಠ ಹಾಗೂ ಸಿಪಿಎಂ ರಾಜ್ಯ ಸಮಿತಿಯ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದರು.

ಮತ್ತಷ್ಟು ಸುದ್ದಿಗಳು

vertical

Latest News

ನಡು ರಸ್ತೆಯಲ್ಲಿ ಮುದ್ದಾದ ಮರಿಗೆ ಜನ್ಮ ನೀಡಿದ ಆನೆ: 1 ಗಂಟೆಗಳ ಸಂಚಾರ ಸ್ಥಗಿತ

newsics.com ಕೇರಳ: ತಮಿಳುನಾಡು - ಕೇರಳ ಸಂಪರ್ಕಿಸುವ ಇಡುಕ್ಕಿಯ ಹೈರೇಂಜ್​ ಜಿಲ್ಲೆಯ ಮರಯೂರು ರಾಷ್ಟ್ರೀಯ ಹೆದ್ದಾರಿ ಮಧ್ಯದಲ್ಲೇ ಆನೆಯೊಂದು ಮರಿಗೆ ಜನ್ಮ ನೀಡಿದೆ. ಪರಿಣಾಮ ಸುಮಾರು ಒಂದು...

ವೈಫ್ ಸ್ವ್ಯಾಪಿಂಗ್:ಪತ್ನಿಗೆ ಕಿರುಕುಳ ನೀಡುತ್ತಿದ್ದ ಉದ್ಯಮಿಯ ವಿರುದ್ಧ ಎಫ್ಐಆರ್ ದಾಖಲು

newsics.com ದೆಹಲಿ: ವೈಫ್ ಸ್ವ್ಯಾಪಿಂಗ್ ಪಾರ್ಟಿಗಳಿಗೆ ಹಾಜರಾಗುವಂತೆ ಪತ್ನಿಯನ್ನು  ಬಲವಂತಾಗಿ ಕರೆದೊಯ್ಯುತ್ತಿದ್ದ  ಗುರುಗ್ರಾಮ್ ಉದ್ಯಮಿಯೊಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಉದ್ಯಮಿಯ ಪತ್ನಿ, ತಾನು ನಿರಾಕರಿಸಿದರೆ ತನ್ನ ಪತಿ  ಲೈಂಗಿಕ ಕಿರುಕುಳ ನೀಡುತ್ತಿದ್ದ ಅಲ್ಲದೇ ರಕ್ಷಣೆಗೆ ಗುರುಗ್ರಾಮ್...

ಕೇಂದ್ರ ಸಚಿವರ ರಾಜೀನಾಮೆ: ಸ್ಮೃತಿ ಇರಾನಿ, ಸಿಂಧಿಯಾಗೆ ಹೆಚ್ಚುವರಿ ಖಾತೆಗಳ ಹೊಣೆ

newsics.com ನವದೆಹಲಿ: ಮುಖ್ತಾರ್ ಅಬ್ಬಾಸ್ ನಖ್ವಿ ಅವರ ರಾಜೀನಾಮೆಯ ನಂತರ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರಿಗೆ ಈಗಾಗಲೇ ಇರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆಯ ಜೊತೆಗೆ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದ ಜವಾಬ್ದಾರಿಯನ್ನು...
- Advertisement -
error: Content is protected !!