newsics.com
ಯುಎಇ: ಇಂಗ್ಲೆಂಡ್ ಆಲ್ ರೌಂಡರ್ ಸ್ಯಾಮ್ ಕರ್ರನ್ ಬೆನ್ನು ನೋವಿನಿಂದಾಗಿ ಐಪಿಎಲ್ ಹಾಗೂ ಟಿ 20 ವಿಶ್ವಕಪ್ ನಿಂದ ಹೊರಗುಳಿಯಲಿದ್ದಾರೆ.
ಐಪಿಎಲ್ ನಲ್ಲಿ ಸ್ಯಾಮ್ ಕರ್ರನ್ ಚೆನ್ನೈ ಸೂಪರ್ ಕಿಂಗ್ಸ ಪರವಾಗಿ ಆಡುತ್ತಿದ್ದರು. ಶನಿವಾರ ನಡೆದ ಸಿಎಸ್ಕೆ – ರಾಜಸ್ಥಾನ ರಾಯಲ್ಸ್ ಪಂದ್ಯದಲ್ಲಿ ಅವರು ಬೆನ್ನಿನ ನೋವಿಗೆ ತುತ್ತಾಗಿದ್ದರು.
ಸ್ಯಾಮ್ ಐಪಿಎಲ್ ಬಯೋ-ಬಬಲ್ ನಿಂದ ನಿರ್ಗಮಿಸಿ, ಹೆಚ್ಚಿನ ಚಿಕಿತ್ಸೆಗೆ ಇಂಗ್ಲೆಂಡ್ ಗೆ ತೆರಳಲಿದ್ದಾರೆ.
“ಅವರು ಮುಂದಿನ ಒಂದೆರಡು ದಿನಗಳಲ್ಲಿ ಯುಕೆಗೆ ಹಿಂತಿರುಗಲಿದ್ದಾರೆ ಮತ್ತು ಈ ವಾರದ ಕೊನೆಯಲ್ಲಿ ಇಸಿಬಿಯ ವೈದ್ಯಕೀಯ ತಂಡ ಅವರ ಆರೋಗ್ಯ ವಿಚಾರಿಸಲಿದೆ” ಎಂದು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.