newsics.com
ಹೈದಾರಾಬಾದ್: ನಟಿ ಸಮಂತಾ ರುತ್ ಪ್ರಭು ನಾಗ ಚೈತನ್ಯ ಅವರೊಂದಿಗಿನ ವಿಚ್ಛೇದನದ ಸುತ್ತಲಿನ ಊಹಾಪೋಹಗಳಿಗೆ ಪ್ರಬಲವಾಗಿ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಇನ್ಸ್ಟಾಗ್ರಾಮ್ ಸ್ಟೋರಿ ಹಾಕಿರುವ ಸಮಂತಾ ರುತ್ ಪ್ರಭು ತಮ್ಮ ಕುರಿತಾಗಿರುವ ಅಫೇರ್ಸ್ ಹಾಗೂ ಗರ್ಭಪಾತದ ಆರೋಪಗಳು ಸುಳ್ಳು ಎಂದು ಹೇಳಿದ್ದಾರೆ.
ವಿಚ್ಛೇದನದ ಸಂದರ್ಭದಲ್ಲಿ ಅವರೊಂದಿಗಿದ್ದ ಅಭಿಮಾನಿಗಳಿಗೆ ಸಮಂತಾ ಧನ್ಯವಾದ ಹೇಳಿದ್ದಾರೆ. “ಭಾವನಾತ್ಮಕ ಬೆಂಬಲಕ್ಕೆ, ಸಹಾನುಭೂತಿ ಮತ್ತು ಕಾಳಜಿಗೆ ಎಲ್ಲರಿಗೂ ಧನ್ಯವಾದ. ಕೆಲವರು ನನಗೆ ಅಫೇರ್ ಇತ್ತು, ಗರ್ಭಪಾತ ಮಾಡಿಸಿಕೊಂಡಿದ್ದೆ, ನಾನು ಅವಕಾಶವಾದಿ ಎಂದು ಸುಳ್ಳು ವದಂತಿಗಳನ್ನು ಹಬ್ಬುತ್ತಿದ್ದಾರೆ” ಎಂದರು.