ಸಂಜಯ್ ರಾವತ್ ಗೆ ಆಗಸ್ಟ್ 22ರ ತನಕ ನ್ಯಾಯಾಂಗ ಬಂಧನ

newsics.com ಮುಂಬೈ: ಶಿವಸೇನಾ ನಾಯಕ ಸಂಜಯ್ ರಾವತ್ ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.  ಆಗಸ್ಟ್ 22ರ ತನಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಸುಮಾರು 1000 ಕೋಟಿ ರೂಪಾಯಿಯ ವಸತಿ  ಹಗರಣಕ್ಕೆ ಸಂಬಂಧಿಸಿದಂತೆ  ಸಂಜಯ್ ರಾವತ್ ನನ್ನು  ಜಾರಿ  ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದಾರೆ. ಸಂಜಯ್ ರಾವತ್ ಅವರ ಪತ್ನಿ ವರ್ಷಾ ರಾವತ್ ಅವರನ್ನು ಕೂಡ  ಇ ಡಿ ವಿಚಾರಣೆಗೆ ಗುರಿಪಡಿಸಿದೆ. ಸಂಜಯ್ ರಾವತ್ ಬಂಧವನ್ನು ಶಿವಸೇನಾದ  ಉದ್ಧವ್ ಠಾಕ್ರೆ ಬಣ ತೀಕ್ಷ್ಣವಾಗಿ ವಿರೋಧಿಸಿದೆ.