newsics.com
ನವದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ತನ್ನ ನಿಶ್ಚಿತ ಠೇವಣಿ (ಎಫ್‌ಡಿ) ಮೇಲಿನ ಬಡ್ಡಿದರಗಳನ್ನು ಕಡಿತಗೊಳಿಸಿದೆ. ಇದೇ ವೇಳೆ, ಆಯ್ದ ಮೆಚುರಿಟಿಗಳ ಮೇಲಿನ ಬಡ್ಡಿದರವನ್ನು ಹೆಚ್ಚಿಸಿದೆ.
ಇತ್ತೀಚಿನ ಪರಿಷ್ಕರಣೆಯ ನಂತರ, ಎಸ್‌ಬಿಐ ಎಫ್‌ಡಿಗಳು 7 ದಿನಗಳಿಂದ 45 ದಿನಗಳವರೆಗೆ ಈಗ ಶೇ. 2.9ರಷ್ಟು ಬಡ್ಡಿ ಪಡೆಯುಲಿವೆ. 46 ದಿನಗಳಿಂದ 179 ದಿನಗಳ ನಡುವಿನ ಅವಧಿಯ ಠೇವಣಿ ಶೇ.3.9ರಷ್ಟು ಬಡ್ಡಿ ನೀಡಲಾಗುತ್ತದೆ. 180 ದಿನಗಳಿಂದ ಒಂದು ವರ್ಷಕ್ಕಿಂತ ಕಡಿಮೆ ಇರುವ ಎಫ್‌ಡಿಗಳು ಶೇ. 4.4ರಷ್ಟು ಬಡ್ಡಿ ಪಡೆಯಲಿವೆ.
9 ಬ್ಯಾಂಕ್’ಗಳಿಗೆ 1,400 ಕೋಟಿ ವಂಚನೆ; ಕ್ವಾಲಿಟಿ ವಿರುದ್ಧ ಸಿಬಿಐ ಕೇಸ್
2 ವರ್ಷಗಳಿಗಿಂತ ಕಡಿಮೆ ಅವಧಿಯ ಮುಕ್ತಾಯದ ಠೇವಣಿಗಳು ಶೇ. 5.1ರ ಬದಲಿಗೆ ಈಗ ಶೇ. 4.9ಕ್ಕೆ ಇಳಿಕೆಯಾಗಿದೆ. 2 ವರ್ಷಗಳಿಗಿಂತ ಮೇಲೆ 3 ವರ್ಷಕ್ಕಿಂತ ಕಡಿಮೆ ಅವಧಿಯ ಎಫ್‌ಡಿಗಳು ಶೇ. 5.1 ಬಡ್ಡಿ ನೀಡುತ್ತದೆ. 3 ವರ್ಷದಿಂದ 5 ವರ್ಷಕ್ಕಿಂತ ಕಡಿಮೆ ಇರುವ ಎಫ್‌ಡಿಗಳು ಶೇ. 5.3ರಷ್ಟು ಮತ್ತು ಟರ್ಮ್ ಠೇವಣಿಗಳಿಗೆ 5 ವರ್ಷಗಳಲ್ಲಿ ಮತ್ತು 10 ವರ್ಷಗಳವರೆಗೆ ಶೇ. 5.4ರಷ್ಟು ನೀಡಲಾಗುವುದು. ಈ ಹೊಸ ಬಡ್ಡಿ ದರಗಳು ಸೆಪ್ಟೆಂಬರ್ 10 ರಿಂದಲೇ ಜಾರಿಯಾಗಿವೆ ಎಂದು ಎಸ್ಬಿಐ ತಿಳಿಸಿದೆ.
12 ಕೋಟಿ ಲಾಟರಿ ಗೆದ್ದ ದೇಗುಲದ ಕ್ಲರ್ಕ್!
ಚೀನಾದಿಂದ ಆಮದು ಪ್ರಮಾಣ ಶೇ.27 ಕುಸಿತ