ಬೀಜಿಂಗ್: ಕೊರೋನಾ ವೈರಸ್ ಹಾವಳಿಯಿಂದ ತತ್ತರಿಸಿರುವ ಚೀನಾದ ವೂಹಾನ್ ನಿಂದ ಭಾರತೀಯರನ್ನು ಕರೆ ತರುವ ಕಾರ್ಯಾಚರಣೆ ಮುಂದುವರಿದಿದೆ. 323 ಭಾರತೀಯರನ್ನು ಹೊತ್ತ ಏರ್ ಇಂಡಿಯಾ ವಿಶೇಷ ವಿಮಾನ ನವದೆಹಲಿಯತ್ತ ಹೊರಟಿದೆ. ಭಾರತದ ಮಿತ್ರ ರಾಷ್ಟ್ರ ಮಾಲ್ಡೀವ್ಸ್ ನ ಏಳು ಮಂದಿ ನಾಗರಿಕರನ್ನು ಕೂಡ ರಕ್ಷಿಸಲಾಗಿದೆ. ಚೀನಾದಲ್ಲಿರುವ ಭಾರತದ ರಾಯಭಾರಿ ವಿಕ್ರಂ ಮಿಸ್ರಿ ಈ ಕುರಿತು ಮಾಹಿತಿ ನೀಡಿದ್ದಾರೆ. ಭಾರತೀಯರ ಸುರಕ್ಷತೆ ಖಾತರಿಪಡಿಸಲು ಸರ್ಕಾರ ಎಲ್ಲ ಕ್ರಮ ತೆಗೆದುಕೊಳ್ಳಲಿದೆ ಎಂದು ಅವರು ಹೇಳಿದ್ದಾರೆ.