newsics.com
ನವದೆಹಲಿ: ಹಿರಿಯ ರಾಜತಾಂತ್ರಿಕ ಹಾಗೂ ಲೇಖಕರಾಗಿ ಗುರುತಿಸಿಕೊಂಡಿದ್ದ ಬಿ ಎಸ್ ಪ್ರಕಾಶ್ ನಿಧನಹೊಂದಿದ್ದಾರೆ.
ಭಾರತ ಮತ್ತು ಬ್ರೆಜಿಲ್ ಮಧ್ಯೆ ರಾಜತಾಂತ್ರಿಕ ಸಂಬಂಧ ಬಲ ವರ್ಧನೆಗೆ ಪ್ರಕಾಶ್ ಮಹತ್ವದ ಕೊಡುಗೆ ನೀಡಿದ್ದರು.
ವಿಶ್ವಸಂಸ್ಥೆ ಸೇರಿದಂತೆ ಹಲವು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು.
ಪ್ರಕಾಶ್ ಅವರು ರಾಜತಾಂತ್ರಿಕ ವಿಚಾರದಲ್ಲಿ ಅಪಾರವಾದ ಅನುಭವ ಹೊಂದಿದ್ದರು. ಸರಳ ಜೀವಿಯಾಗಿದ್ದರು. ಪ್ರಕಾಶ್ ಅವರ ನಿಧನಕ್ಕೆ ಭಾರತದ ಮಾಜಿ ಅಮೆರಿಕ ರಾಯಭಾರಿ ನಿರುಪಮ ಮೆನನ್ ರಾವ್ ಸೇರಿದಂತೆ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ.