newsics.com
ಕೋಲ್ಕತ್ತ: ಹಿರಿಯ ಪರಮಾಣು ವಿಜ್ಞಾನಿ ಮತ್ತು ಪರಮಾಣು ಇಂಧನ ಆಯೋಗದ ಮಾಜಿ ಅಧ್ಯಕ್ಷ ಡಾ. ಶೇಖರ್ ಬಸು (68) ಅವರು ಗುರುವಾರ ಕೋರೋಣ ಸೋಂಕಿನಿಂದ ನಿಧನರಾದರು.
ಕೊರೋನಾ ಸೋಂಕಿನ ಜತೆಗೆ ಅವರು ಮೂತ್ರಪಿಂಡ ವೈಫಲ್ಯದಿಂದಲೂ ನರಳುತ್ತಿದ್ದರು ಎಂದು ಆರೋಗ್ಯಾಧಿಕಾರಿ ತಿಳಿಸಿದ್ದಾರೆ.
ಮೆಕಾನಿಕಲ್ ಎಂಜನಿಯರ್ ಆಗಿದ್ದ ಬಸು ಅವರು ದೇಶದ ಪರಮಾಣು ಶಕ್ತಿ ಕಾರ್ಯಕ್ರಮಕ್ಕೆ ಸಾಕಷ್ಟು ಕೊಡುಗೆ ನೀಡಿದ್ದರು. ಅವರ ಕೊಡುಗೆಯನ್ನು ಸ್ಮರಿಸಿ ಕೇಂದ್ರ ಸರ್ಕಾರ 2014ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು. ದೇಶದ ಮೊದಲ ಪರಮಾಣು-ಚಾಲಿತ ಜಲಾಂತರ್ಗಾಮಿ ನೌಕೆ ಐಎನ್‌ಎಸ್ ಅರಿಹಂತ್‌ಗೆ ಸಂಕೀರ್ಣವಾದ ರಿಯಾಕ್ಟರ್ ನಿರ್ಮಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು.
ಹಿರಿಯ ಪರಮಾಣು ವಿಜ್ಞಾನಿ ಶೇಖರ್ ಬಸು ಕೊರೋನಾಗೆ ಬಲಿ
Follow Us