ಗುವಾಹಟಿ: ಅಸ್ಸಾಂ ರೈಫಲ್ಸ್ ಮತ್ತು ಅಸ್ಸಾಂ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಹಿರಿಯ ಉಲ್ಫಾ ಕಮಾಂಡರ್ ನೊಬ್ಬನನ್ನು ಬಂಧಿಸಲಾಗಿದೆ. ಅಸ್ಸಾಂನ ತಿನ್ಸುಕಿಯಾ ಸಮೀಪದ ಲಾಲ್ ಪಹರ್ ಎಂಬಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಉಲ್ಫಾ ಕಮಾಂಡರನನ್ನು ಬಂಧಿಸಲಾಯಿತು. ಕಳೆದ ಹಲವು ವರ್ಷಗಳಿಂದ ಈ ಕಮಾಂಡರ್ ಬಂಧನಕ್ಕೆ ಕಾರ್ಯತಂತ್ರ ಹೆಣೆಯಲಾಗಿತ್ತು.
ಹಿರಿಯ ಉಲ್ಫಾ ಕಮಾಂಡರ್ ಬಂಧನದಿಂದ ಅಸ್ಸಾಂನಲ್ಲಿ ಭಯೋತ್ಪಾದನಾ ಚಟುವಟಿಕೆಗೆ ಮತ್ತೆ ಚಾಲನೆ ನೀಡುವ ದುಷ್ಟ ಸಂಚನ್ನು ವಿಫಲಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನುಷ್ಟು ಶೋಧ ಕಾರ್ಯಾಚರಣೆ ನಡೆಸಲು ಅಸ್ಸಾಂ ರೈಫಲ್ಸ್ ನಿರ್ಧರಿಸಿದೆ.