newsics.com
ಇಂದೋರ್: ನ್ಯೂಜಿಲೆಂಡ್ ವಿರುದ್ಧದ ಅಂತಿಮ ಮತ್ತು ಮೂರನೇ ಏಕದಿನ ಪಂದ್ಯದಲ್ಲಿ 90 ರನ್ ಗಳಿಂದ ಗೆಲುವು ಸಾಧಿಸಿದ ಭಾರತ ಸರಣಿ ಕ್ಲೀನ್ ಸ್ವೀಪ್ ಮಾಡಿದೆ. ಇದರೊಂದಿಗೆ ಏಕದಿನ ಐಸಿಸಿ ರ್ಯಾಕಿಂಗ್ನಲ್ಲಿ ಭಾರತ ಅಗ್ರಸ್ಥಾನಕ್ಕೇರಿದೆ.
ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಪರ ನಾಯಕ ರೋಹಿತ್ ಶರ್ಮಾ 101, ಶುಭ್ ಮನ್ ಗಿಲ್ 112 ರನ್ ಗಳಿಸುವ ಮೂಲಕ ಗೆಲುವಿಗೆ ನಾಂದಿ ಹಾಡಿದರು.
ವಿರಾಟ್ ಕೊಹ್ಲಿ, 36, ಇಶಾನ್ ಕಿಶಾನ್ 14, ಹಾರ್ದಿಕ್ ಪಾಂಡ್ಯ ಭರ್ಜರಿ ಅರ್ಧ ಶತಕ (54) ಗಳಿಸುವ ಮೂಲಕ ಟೀಂ ಇಂಡಿಯಾದ ರನ್ ವೇಗ ಹೆಚ್ಚಿಸಿದರು. ವಾಷಿಂಗ್ಟನ್ ಸುಂದರ್ 9, ಶಾರ್ದೂಲ್ ಠಾಕೂರ್ 25, ಕುಲದೀಪ್ ಯಾದವ್ 3, ಉಮ್ರಾನ್ ಮಲ್ಲಿಕ್ 2 ರನ್ ಗಳಿಸುವುದರೊಂದಿಗೆ ಟೀಂ ಇಂಡಿಯಾ ನಿಗದಿತ 50 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 385 ಬೃಹತ್ ಮೊತ್ತ ಪೇರಿಸಿತು.
ಭಾರತದ ರನ್ ಗುರಿ ಬೆನ್ನತ್ತಿದ ನ್ಯೂಜಿಲೆಂಡ್ ತಂಡ ಆರಂಭಿಕ ಆಟಗಾರ ಫಿನ್ ಅಲೆನ್ ಶೂನ್ಯಕ್ಕೆ ಔಟಾಗುವ ಮೂಲಕ ಆರಂಭದಲ್ಲಿಯೇ ಆಘಾತ ಅನುಭವಿಸಿತು. ಡೇವೊನ್ ಕಾನ್ ವೇ 138 ರನ್ ಗಳಿಸಿದರು. ಅವರನ್ನು ಫೆವಿಲಿಯನ್ಗೆ ಅಟ್ಟುವಲ್ಲಿ ಉಮ್ರಾನ್ ಮಲ್ಲಿಕ್ ಯಶಸ್ವಿಯಾದರು.
ನ್ಯೂಜಿಲೆಂಡ್ 41. 2 ಓವರ್ಗಳಲ್ಲಿ 295 ರನ್ಗಳಿಗೆ ಆಲೌಟ್ ಆಗುವ ಮೂಲಕ ಭಾರತ 90 ರನ್ಗಳಿಂದ ಭರ್ಜರಿ ಗೆಲುವು ಸಾಧಿಸಿತು. ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್ ತಲಾ 3 ವಿಕೆಟ್ ಪಡೆದರೆ, ಚಹಲ್ 2, ಹಾರ್ದಿಕ್ ಪಾಂಡ್ಯ ಹಾಗೂ ಉಮ್ರಾನ್ ಮಲ್ಲಿಕ್ ತಲಾ 1 ವಿಕೆಟ್ ಪಡೆದರು. ಶಾರ್ದೂಲ್ ಠಾಕೂರ್ ಪ್ಲೇಯರ್ ಆಫ್ ದಿ ಮ್ಯಾಚ್, ಶುಭಮನ್ ಗಿಲ್, ಸರಣಿ ಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದರು.
Another comprehensive performance from #TeamIndia as they outclass New Zealand by 90 runs in Indore to complete a 3-0 whitewash. 🙌🏽
Scorecard ▶️ https://t.co/ojTz5RqWZf…#INDvNZ | @mastercardindia pic.twitter.com/7IQZ3J2xfI
— BCCI (@BCCI) January 24, 2023
ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಪ್ರಕರಣ: ಮುರುಘಾ ಶರಣರ ವಿರುದ್ಧ ಕೋರ್ಟ್ಗೆ ದೋಷಾರೋಪ ಪಟ್ಟಿ
ರಾಮಚರಿತಮಾನಸ ಮಹಾಕಾವ್ಯವನ್ನು ಜೈಲಿನಲ್ಲೇ ‘ಆಂಗಿಕ’ ಭಾಷೆಗೆ ಅನುವಾದಿಸಿದ ಕೊಲೆ ಅಪರಾಧಿ