Wednesday, March 3, 2021

ಸಿಬ್ಬಂದಿ ಕಟ್ಟಿಹಾಕಿ ಏಳು ಕೋಟಿ ರೂಪಾಯಿ ಮೌಲ್ಯದ ಚಿನ್ನ ದರೋಡೆ

Newsics.com

ಕೃಷ್ಣಗಿರಿ: ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯಲ್ಲಿ ಭಾರೀ ದರೋಡೆ ನಡೆದಿದೆ. ಬರೋಬರಿ ಏಳು ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ಕದ್ದು ದರೋಡೆಕೋರರು ಪರಾರಿಯಾಗಿದ್ದಾರೆ.

ಹೊಸೂರು –ಬಾಗಲೂರು ರಸ್ತೆಯಲ್ಲಿರುವ ಮುತ್ತೂಟ್ ಫೈನಾನ್ಸ್ ಸಂಸ್ಥೆಯಲ್ಲಿ ಈ ದರೋಡೆ ನಡೆದಿದೆ. ಗ್ರಾಹಕರ ಸೋಗಿನಲ್ಲಿ ಕಚೇರಿಗೆ ಬಂದ ದರೋಡೆಕೋರರು ಕೆಲ ಕಾಲ ಮಾತುಕತೆ ನಡೆಸಿದ ಬಳಿಕ ಪಿಸ್ತೂಲ್ ತೋರಿಸಿ ಬೆದರಿಸಿ ಈ ಕೃತ್ಯ ಎಸಗಿದ್ದಾರೆ.

ಸಿಬ್ಬಂದಿಯನ್ನುಕಟ್ಟಿ ಹಾಕಿದ ದರೋಡೆಕೋರರು, ಲಾಕರ್ ಕೀ ಪಡೆದು ಚಿನ್ನಾಭರಣ ಎಗರಿಸಿ ಪರಾರಿಯಾಗಿದ್ದಾರೆ. ಸಿಸಿಟಿವಿಯಲ್ಲಿ ದರೋಡೆ ಕೃತ್ಯ ರೆಕಾರ್ಡ್ ಆಗಿದೆ.

ಹಿರಿಯ ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ಧಾವಿಸಿದ್ದಾರೆ

ಮತ್ತಷ್ಟು ಸುದ್ದಿಗಳು

Latest News

ಇನ್ನು ನಾಲ್ಕೇ ವರ್ಷದಲ್ಲಿ ಅಂತರಿಕ್ಷದಲ್ಲೂ ಐಷಾರಾಮಿ ಹೋಟೆಲ್!

newsics.comವಾಷಿಂಗ್ಟನ್‌: ಇನ್ನು ನಾಲ್ಕೇ ವರ್ಷದಲ್ಲಿ ಅಂತರಿಕ್ಷದಲ್ಲೂ ಇಡ್ಲಿ, ಟೀ, ಕಾಫಿ ಸಿಗಬಹುದು.ಮುಂದಿನ 4 ವರ್ಷದಲ್ಲಿ ಅಂತರಿಕ್ಷದಲ್ಲಿ  “ವೊಯೇಜರ್‌ ಸ್ಟೇಷನ್‌’ ಎಂಬ ವೈಭವೋಪೇತ ಹೋಟೆಲೊಂದು...

ಮನೆಯಲ್ಲೇ ಲಸಿಕೆ ಪಡೆದ ಕೃಷಿ ಸಚಿವ; ವರದಿ ಕೇಳಿದ ಕೇಂದ್ರ

newsics.comನವದೆಹಲಿ: ರಾಜ್ಯ ಕೃಷಿ ಸಚಿವ ಬಿ.ಸಿ. ಪಾಟೀಲ್ ಅವರು ಇಂದು(ಮಾ.2) ತಮ್ಮ ಮನೆಯಲ್ಲೇ ಕೊರೋನಾ ಲಸಿಕೆ ಹಾಕಿಸಿಕೊಂಡಿರುವುದು ವಿವಾದಕ್ಕೆಡೆ ಮಾಡಿದೆ.ನರ್ಸ್ಗಳನ್ನು ಮನೆಗೆ ಕರೆಸಿಕೊಂಡು ಸಚಿವ ಬಿ.ಸಿ.ಪಾಟೀಲ್ ಕೊರೋನಾ ಲಸಿಕೆ ಹಾಕಿಸಿಕೊಂಡಿದ್ದು,...

ದಿನೇಶ್ ಕಲ್ಲಹಳ್ಳಿ ಯಾರೆಂದೇ ತಿಳಿದಿಲ್ಲ, ತನಿಖೆ ನಡೆಯಲಿ-ಸಚಿವ ರಮೇಶ್ ಜಾರಕಿಹೊಳಿ

newsics.com ಬೆಂಗಳೂರು: ಕಳೆದ 21 ವರ್ಷದಿಂದ ನಾನು ಶಾಸಕನಾಗಿ ಆಯ್ಕೆಯಾಗುತ್ತಿದ್ದೇನೆ. ದಿನೇಶ್ ಕಲ್ಲಹಳ್ಳಿಯಾಗಲೀ ಯುವತಿಯಾಗಲಿ ಯಾರೆಂದು ತನಗೆ ತಿಳಿದಿಲ್ಲ ಎಂದು ಸಚಿವ ರಮೇಶ್ ಜಾರಕಿಹೊಳಿ ‌ಹೇಳಿಕೆ ನೀಡಿದ್ದಾರೆ. ಯುವತಿಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾರೆ ಎಂದು ಆರೋಪಿಸಿದ ವಿಡಿಯೋ...
- Advertisement -
error: Content is protected !!