Thursday, December 1, 2022

ಏಳರ ಬಾಲೆ ಈಗ ವಿಶ್ವದ ಕಿರಿಯ ಲೇಖಕಿ

Follow Us

NEWSICS.COM

ಘಾಜಿಯಾಬಾದ್: ರಾಷ್ಟ್ರಕವಿ ಮೈತಿಲಿಶರಣ್ ಗುಪ್ತ್ ಮತ್ತು ಸಂತಕವಿ ಶ್ರೀ ಸಿಯಾರಾಮ್‌ಶರನ್ ಗುಪ್ತ್ ಅವರ ಮೊಮ್ಮಗಳು ಅಭಿಜಿತಾ ಗುಪ್ತಾ ತಮ್ಮ ಏಳನೇ ವಯಸ್ಸಿನಲ್ಲಿ ವಿಶ್ವದ ಕಿರಿಯ ಲೇಖಕಿ ಎನಿಸಿಕೊಂಡಿದ್ದಾರೆ. ‘ಹ್ಯಾಪಿನೆಸ್ ಆಲ್ ಅರೌಂಡ್’ ಎಂಬ ಹೆಸರಿನ ,ಕವನ ಮತ್ತು ಕಥೆಗಳ ಸಂಗ್ರಹದ ಪುಸ್ತಕವನ್ನು ಅಭಿಜಿತಾ ಪ್ರಕಟಿಸಿದ್ದಾಳೆ.

ಇದೇ ಕಾರಣಕ್ಕೆ ಈ ಏಳರ ಬಾಲಕಿಯನ್ನು ಇಂಟರ್ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್ ವಿಶ್ವದ ಅತ್ಯಂತ ಕಿರಿಯ ಲೇಖಕಿ ಎಂದು ಗುರುತಿಸಿದೆ. ಅಲ್ಲದೆ ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ತನ್ನ ‘ಗ್ರ್ಯಾಂಡ್ ಮಾಸ್ಟರ್ ಇನ್ ರೈಟಿಂಗ್’ ಶೀರ್ಷಿಕೆಯನ್ನು ನೀಡಿದೆ.
ಪ್ರಸ್ತುತ ,2 ನೇ ತರಗತಿಯಲ್ಲಿ ಓದುತ್ತಿರುವ ಈಕೆ ಕೊರೋನಾ ಲಾಕ್ ಡೌನ್ ಸಮಯದಲ್ಲಿ ರೂಢಿಸಿಕೊಂಡ ಹವ್ಯಾಸ ಪುಸ್ತಕ  ಪ್ರಕಟಿಸುವಂತೆ ಮಾಡಿದೆ.

ಸುತ್ತಮುತ್ತಲಿನ ಪ್ರದೇಶ, ಸಣ್ಣ ಸಣ್ಣ ವಿಷಯಗಳು ಸಹ ನನಗೆ ಸ್ಫೂರ್ತಿ ನೀಡುತ್ತವೆ. ನಾನು ಕೇಳುವ, ನೋಡುವ ಅಥವಾ ಅನುಭವಿಸುವ ಸಕಾರಾತ್ಮಕ ವಿಷಯಗಳ ಬಗ್ಗೆ ಬರೆಯುತ್ತೇನೆ ಎಂದು ಅಭಿಜಿತಾ ಗುಪ್ತಾ ಹೇಳಿದ್ದಾರೆ.

ಅರ್ನಾಬ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

ಮತ್ತಷ್ಟು ಸುದ್ದಿಗಳು

vertical

Latest News

ಅಂದು ಟಿ ವಿ ನಿರೂಪಕಿ ಇಂದು ಮಧ್ಯವರ್ತಿ: ಬಂಧಿತ ಪಿಂಕಿ ಇರಾನಿ ನಿಗೂಢ ಹೆಜ್ಜೆ

newsics.com ನವದೆಹಲಿ: ವಂಚಕ ಸುಕೇಶ್ ಚಂದ್ರ ಶೇಖರ್ ಗೆ ಸೆಲೆಬ್ರಿಟಿಗಳನ್ನು ಪರಿಚಯ ಮಾಡಿಸಿದ್ದ ಮಧ್ಯವರ್ತಿ ಪಿಂಕಿ ಇರಾನಿ ವೃತ್ತಿ ಜೀವನ ಆರಂಭಿಸಿದ್ದು ಟಿ ವಿ ನಿರೂಪಕಿಯಾಗಿ. ಮುಂಬೈನ ಚಾನೆಲ್...

ರೌಡಿಗಳನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ : ಸಿಎಂ ಬೊಮ್ಮಾಯಿ ಸ್ಪಷ್ಟನೆ

newsics.com ಬೆಂಗಳೂರು: ಬಿಜೆಪಿ ತತ್ವಗಳಲ್ಲಿ ನಂಬಿಕೆ ಇಟ್ಟಿರುವ ಪಕ್ಷವಾಗಿದ್ದು, ರೌಡಿಗಳಿಗೆ , ಪಾತಕಿಗಳಿಗೆ ಅವಕಾಶ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ. ಬೆಂಗಳೂರಿನಲ್ಲಿ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ. ಬೆಂಗಳೂರಿನ ಕುಖ್ಯಾತ ಪಾತಕಿ ಸೈಲೆಂಟ್...

ಕೊರಿಯಾದ ಮಹಿಳಾ ಯು ಟ್ಯೂಬರ್ ಗೆ ಕಿರುಕುಳ: ಇಬ್ಬರು ಆರೋಪಿಗಳ ಬಂಧನ

newsics.com ಮುಂಬೈ: ಮಹಾ ನಗರ ಮುಂಬೈನ ಖಾರ್ ಪ್ರದೇಶದಲ್ಲಿ ಸಾವಿರಾರು ಜನರ ಮುಂದೆ ಕೊರಿಯಾದ ಯೂ ಟ್ಯೂಬರ್ ಗೆ ಕಿರುಕುಳ ನೀಡಿದ  ಆರೋಪಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಗಳನ್ನು  ಮೊಹಮ್ಮದ್ ಶೇಕ್ ಮತ್ತು  ಮೊಹಮ್ಮದ್...
- Advertisement -
error: Content is protected !!