Wednesday, July 6, 2022

3 ಮದುವೆಯಾದ ಈ ಸೆಕ್ಸ್ ಕ್ವೀನ್ ಹೆಣ್ಮಕ್ಕಳಿಗೆ ಮಾತ್ರ ಶಾಪ!

Follow Us

ನವದೆಹಲಿ: ಆಕೆ‌ ದುಡಿಯುವ‌ ತಂದೆಯೊಂದಿಗೆ ದೆಹಲಿಗೆ ಬಂದಳು. ದೆಹಲಿಗೆ ಬಂದಾಗ ಅಮಾಯಕಿಯಾಗಿದ್ದ ಆಕೆ ದೆಹಲಿಯ ಬದುಕಿನ ಜಂಜಡಕ್ಕೆ ಸಿಲುಕಿ ಅಮಾಯಕ ಹೆಣ್ಣುಮಕ್ಕಳನ್ನು ವೇಶ್ಯಾವಾಟಿಕೆಗೆ ತಳ್ಳಿ ಇದೀಗ 12 ಬಾಲೆಯರನ್ನು ವೇಶ್ಯಾವಾಟಿಕೆಗೆ ತಳ್ಳಿದ ಆರೋಪದಡಿ 24 ವರ್ಷಗಳ ಶಿಕ್ಷೆಗೆ ಗುರಿಯಾಗಿದ್ದಾಳೆ.
ಈ ಕಥಾನಾಯಕಿಯ ಅಸಲಿ ಹೆಸರು ಗೀತಾ ಅರೋರಾ. ಹರಿಯಾಣ ಮೂಲದ ಈಕೆಯ ತಂದೆ ಕೆಲಸ ಹುಡುಕಿ ದೆಹಲಿಗೆ ಬಂದು ಅಲ್ಲಿ ಆಟೋ ಚಲಾಯಿಸಿಕೊಂಡು ಬದುಕುತ್ತಿದ್ದರು.
ನೋಡಲು ಸುಂದರಿಯಾಗಿದ್ದ ಗೀತಾ 10ನೇ ಕ್ಲಾಸ್‌ ಪಾಸು ಮಾಡಿದ ಬಳಿಕ ದುಡಿಮೆಗಾಗಿ ಬ್ಯೂಟಿ ಪಾರ್ಲರ್‌ ಓಪನ್‌ ಮಾಡಿದಳು. ಆದರೆ ವ್ಯಾಪಾರವಾಗಲಿಲ್ಲ. ಹೀಗಾಗಿ ಬೇರೆಯವರ ಅಂದ‌ ಹೆಚ್ಚಿಸುವ ಬದಲು ತನ್ನ ಸುಂದರವಾದ ದೇಹವನ್ನೆ ಮಾರಾಟ ಮಾಡಲು ಮುಂದಾದಳು. ಆಗಲೆ ಆಕೆಯ ಅದೃಷ್ಟ ಖುಲಾಯಿಸಿ ಒಳ್ಳೆಯ ದುಡ್ಡು ಹರಿದುಬಂತು.
ಬಳಿಕ ಆಕೆ ಕ್ರಿಮಿನಲ್‌ ವ್ಯಕ್ತಿಯೊಬ್ಬನನ್ನು ಮದುವೆಯಾದಳು. ಆತನು ರೌಡಿ. ಆದರೆ ಆತ ಬಹುಕಾಲ ಅಕೆಯೊಂದಿಗೆ ಬದುಕಲಿಲ್ಲ. ಎನ್ ಕೌಂಟರ್ ನಲ್ಲಿ ಸತ್ತವನು ಆಕೆಗೆ ವಿಧವೆ ಪಟ್ಟ ತಂದಿತ್ತ.
ಇದಕ್ಕೆಲ್ಲ ಹೆದರದ ಗೀತಾ ಕೆಲ ಕಾಲದ ಬಳಿಕ ಇನ್ನೊಬ್ಬ ರೌಡಿ ದೀಪಕ್ ಜತೆ ಮದುವೆಯಾದಳು. ಆತನೂ ಎನ್ ಕೌಂಟರ್ ನಲ್ಲಿ ಸತ್ತ. ಬಳಿಕ ಅವನ ತಮ್ಮನ ಜತೆ ಮದುವೆಯಾದಳು. ಆಕೆಯ ದುರಾದೃಷ್ಟಕ್ಕೆ ಈತನೂ ಎನ್ ಕೌಂಟರ್ ಗೆ ಬಲಿಯಾದ. ಗೀತಾಳ ಮೂರೂ ಗಂಡಂದಿರೂ ಎನ್‌ಕೌಂಟರ್‌ನಲ್ಲಿಯೇ ಸತ್ತುಹೋಗಿದ್ದು ಒಂಥರಾ ವಿಚಿತ್ರವೇ ಸರಿ.
ಈ ಎಲ್ಲ ಘಟನೆ ಬಳಿಕ‌‌ ಮದುವೆ ಸರ್ಕಸ್ ಬಿಟ್ಟ ಗೀತಾ ತನ್ನ ದಂಧೆಯನ್ನೇ ವಿಸ್ತರಿಸಲಾರಂಭಿಸಿದಳು. ಮೂರನೇ ಗಂಡ ಹೇಮಂತ್ ನ ಸ್ನೇಹಿತ ಅಶೋಕ್ ಆಕೆಗೆ ದೊಡ್ಡ ಮಟ್ಟದ ಸೆಕ್ಸ್ ರಾಕೆಟ್ ನಡೆಸುವ ಐಡಿಯಾ ಕೊಟ್ಟಿದ್ದ.
ಮದುವೆಯಾದ ಮೂವರಿಂದಲೂ ಸಾಕಷ್ಟು ಆಸ್ತಿ ಸಂಪಾದನೆ ಮಾಡಿದ್ದ ಇವಳು ತನ್ನ ವೈಶ್ಯಾವಾಟಿಕೆಯ ಜಾಲವನ್ನು ವಿಸ್ತರಿಸುತ್ತ ಆದಾಯ ಇನ್ನಷ್ಟು ಹೆಚ್ಚಿಸುತ್ತ ಹೋದಳು.
ಇಷ್ಟರಲ್ಲಾಗಲೇ, ಗೀತಾ ವಿರುದ್ಧ ಹಲವಾರು ದೂರುಗಳು ದಾಖಲಾದ ಹಿನ್ನೆಲೆಯಲ್ಲಿ, ಮಹಾರಾಷ್ಟ್ರ ಕಂಟ್ರೋಲ್ ಆಫ್ ಆರ್ಗನೈಸ್ಡ್‌ ಕ್ರೈಂ ಆಕ್ಟ್‌ 1999 ರ ಅಡಿಯಲ್ಲಿ ದೂರು ದಾಖಲಾಯ್ತು. ಆದರೆ ಗೀತಾ ಪೊಲೀಸರ ಕೈಗೆ ಸಿಗಲಿಲ್ಲ. ದಲ್ಲಾಳಿಗಳ ಮೂಲಕ ದಂಧೆ ಮುಂದುವರಿಸಿದ ಗೀತಾಳ ಟಾರ್ಗೆಟ್ ಚಿಕ್ಕವಯಸ್ಸಿನ ಹುಡುಗಿಯರು.
ಮಾಡೆಲಿಂಗ್‌ ಆಸೆ ಹೊತ್ತ ಯುವತಿಯರನ್ನೂ ಟಾರ್ಗೆಟ್‌ ಮಾಡಿಕೊಂಡ ಗೀತಾ, ಅವರನ್ನೂ ಸಪ್ಲೈ ಮಾಡುವುದಕ್ಕೆ ಶುರುಮಾಡಿದಳು. ದೊಡ್ಡದೊಡ್ಡ ಹೋಟೆಲ್‌ಗಳ ‘ದೊಡ್ಡ ಜನರಿಗೆ’ ಹುಡುಗಿಯರ ಸಪ್ಲೈ ಕೂಡ ಇವಳೇ ಮಾಡತೊಡಗಿದಳು.
ಇಷ್ಟಾದರೂ ಪೊಲೀಸರಿಗೆ ಯಾವುದೇ ಸುಳಿವು ನೀಡುತ್ತಿರಲಿಲ್ಲ. ಈಕೆ ವಿರುದ್ಧ ಅನೇಕ ಕೊಲೆ ಕೇಸ್‌ಗಳೂ ಇದ್ದರೂ, ಸಾಕ್ಷ್ಯಾಧಾರಗಳು ಇರಲಿಲ್ಲ. ಇದೇ ಮೊದಲ ಬಾರಿಗೆ 12 ವರ್ಷದ ಬಾಲಕಿಯ ಕೇಸ್‌ನಲ್ಲಿ ಸಿಕ್ಕಿಬಿದ್ದ ಇದೀಗ ತಾನು ಮಾಡಿದ ಎಲ್ಲ ಪಾಪದ ಲೆಕ್ಕಾಚಾರಕ್ಕೆ ಸಿಕ್ಕಿ ಜೈಲಿನ ಕಂಬಿ ಎಣಿಸುತ್ತಿದ್ದಾಳೆ.

ಮತ್ತಷ್ಟು ಸುದ್ದಿಗಳು

vertical

Latest News

ನಡು ರಸ್ತೆಯಲ್ಲಿ ಮುದ್ದಾದ ಮರಿಗೆ ಜನ್ಮ ನೀಡಿದ ಆನೆ: 1 ಗಂಟೆಗಳ ಸಂಚಾರ ಸ್ಥಗಿತ

newsics.com ಕೇರಳ: ತಮಿಳುನಾಡು - ಕೇರಳ ಸಂಪರ್ಕಿಸುವ ಇಡುಕ್ಕಿಯ ಹೈರೇಂಜ್​ ಜಿಲ್ಲೆಯ ಮರಯೂರು ರಾಷ್ಟ್ರೀಯ ಹೆದ್ದಾರಿ ಮಧ್ಯದಲ್ಲೇ ಆನೆಯೊಂದು ಮರಿಗೆ ಜನ್ಮ ನೀಡಿದೆ. ಪರಿಣಾಮ ಸುಮಾರು ಒಂದು...

ವೈಫ್ ಸ್ವ್ಯಾಪಿಂಗ್:ಪತ್ನಿಗೆ ಕಿರುಕುಳ ನೀಡುತ್ತಿದ್ದ ಉದ್ಯಮಿಯ ವಿರುದ್ಧ ಎಫ್ಐಆರ್ ದಾಖಲು

newsics.com ದೆಹಲಿ: ವೈಫ್ ಸ್ವ್ಯಾಪಿಂಗ್ ಪಾರ್ಟಿಗಳಿಗೆ ಹಾಜರಾಗುವಂತೆ ಪತ್ನಿಯನ್ನು  ಬಲವಂತಾಗಿ ಕರೆದೊಯ್ಯುತ್ತಿದ್ದ  ಗುರುಗ್ರಾಮ್ ಉದ್ಯಮಿಯೊಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಉದ್ಯಮಿಯ ಪತ್ನಿ, ತಾನು ನಿರಾಕರಿಸಿದರೆ ತನ್ನ ಪತಿ  ಲೈಂಗಿಕ ಕಿರುಕುಳ ನೀಡುತ್ತಿದ್ದ ಅಲ್ಲದೇ ರಕ್ಷಣೆಗೆ ಗುರುಗ್ರಾಮ್...

ಕೇಂದ್ರ ಸಚಿವರ ರಾಜೀನಾಮೆ: ಸ್ಮೃತಿ ಇರಾನಿ, ಸಿಂಧಿಯಾಗೆ ಹೆಚ್ಚುವರಿ ಖಾತೆಗಳ ಹೊಣೆ

newsics.com ನವದೆಹಲಿ: ಮುಖ್ತಾರ್ ಅಬ್ಬಾಸ್ ನಖ್ವಿ ಅವರ ರಾಜೀನಾಮೆಯ ನಂತರ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರಿಗೆ ಈಗಾಗಲೇ ಇರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆಯ ಜೊತೆಗೆ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದ ಜವಾಬ್ದಾರಿಯನ್ನು...
- Advertisement -
error: Content is protected !!