newsics.com
ನವದೆಹಲಿ: ಮಾಜಿ ಸಚಿವ ರಾಜೇಂದ್ರ ಬಹುಗುಣ ಗುಂಡು ಹೊಡೆದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ತಮ್ಮ ಮೊಮ್ಮಗಳಿಗೆ ಲೈಂಗಿಕ ಕಿರುಕುಳ ನೀಡಿರುವುದಾಗಿ ಆರೋಪಿಸಿ ಉತ್ತರಾಖಂಡ್‌ನ ಮಾಜಿ ಸಚಿವ ರಾಜೇಂದ್ರ ಬಹುಗುಣ ವಿರುದ್ಧ ಸೊಸೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಮೂರು ದಿನಗಳ ಬಳಿಕ ಅಂದರೆ ಶುಕ್ರವಾರ ಬಹುಗುಣ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬಹುಗುಣ(59) ಅವರು ತಮ್ಮ ಹಲ್ ಡ್ವಾನಿ ಪೊಲೀಸ್ ಠಾಣೆಯ ತುರ್ತು (112) ದೂರವಾಣಿ ಸಂಖ್ಯೆಗೆ ಕರೆ ಮಾಡಿ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿದ್ದರು. ಪೊಲೀಸರು ಮತ್ತು ನೆರೆಹೊರೆಯವರ ಸಮ್ಮುಖದಲ್ಲಿಯೇ ತನಗೆ ತಾನೇ ಗುಂಡು ಹೊಡೆದುಕೊಂಡು ಸಾವನ್ನಪ್ಪಿರುವುದಾಗಿ ವರದಿ ತಿಳಿಸಿದೆ.
ಸೊಸೆಯ ಆರೋಪದಿಂದ ಬಹುಗುಣ ಅವರು ತುಂಬಾ ಆಘಾತಕ್ಕೊಳಗಾಗಿದ್ದರು. ಗುಂಡು ಹೊಡೆದುಕೊಳ್ಳದಂತೆ ಧ್ವನಿವರ್ಧಕದ ಮೂಲಕ ವಿನಂತಿಸಿಕೊಂಡಿದ್ದರು. ಆದರೆ ಟ್ಯಾಂಕ್ ಮೇಲೆ ನಿಂತಿದ್ದ ಬಹುಗುಣ ತಮ್ಮ ಎದೆಗೆ ಗುಂಡು ಹೊಡೆದುಕೊಂಡು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೊಸೆ ನೀಡಿರುವ ದೂರಿನ ಆಧಾರದ ಮೇಲೆ ಬಹುಗುಣ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.ರಾಜೇಂದ್ರ ಬಹುಗುಣ 2004ರಲ್ಲಿ ಉತ್ತರಾಖಂಡ್‌ನ ಎನ್ ಡಿ ತಿವಾರಿ ಸರ್ಕಾರದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.