ಚೆನೈ: 90ರ ದಶಕದ ಪಡ್ಡೆ ಹೈಕಳ ನಿದ್ದೆಗೆಡಿಸಿದ್ದ ಸಿನಿತಾರೆ ಶಕೀಲಾ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕೆಲ ದಿನಗಳಲ್ಲೇ ಶಕೀಲಾರ ಲೇಡೀಸ್ ನಾಟ್ ಅಲೌಡ್ ಚಿತ್ರ ಬಿಡುಗಡೆಯಾಗಲಿದ್ದು, ಈ ಹೊತ್ತಿನಲ್ಲೇ ಅನಾರೋಗ್ಯಕ್ಕಿಡಾದ ಅವರು ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಈ ವೇಳೆ ಆಸ್ಪತ್ರೆಯಿಂದಲೇ ಅಭಿಮಾನಿಗಳಿಗೆ ವಿಡಿಯೋ ಮೂಲಕ ಶಕೀಲಾ ತಮ್ಮ ಚಿತ್ರವನ್ನು ನೋಡಿ ಪ್ರೋತ್ಸಾಹಿಸುವಂತೆ ಮನವಿ ಕೂಡ ಮಾಡಿದ್ದಾರೆ.
ಸಣ್ಣ ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆ ಸೇರಿರುವ ಶಕೀಲಾ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಆದರೂ ಸೋಷಿಯಲ್ ಮೀಡಿಯಾದಲ್ಲಿ ಮಾತನಾಡಿದ ಶಕೀಲಾ ಅಭಿಮಾನಿಗಳು, ಬೇಗ ಚೇತರಿಸಿಕೊಳ್ಳಿ ಎಂದು ಹಾರೈಸಿ ಕಳಕಳಿ ಮೆರೆದಿದ್ದಾರೆ.
ಹಾರರ್ ಮತ್ತು ಸಾಫ್ಟ್ ಪೋರ್ನ್ ಮಾದರಿಯಲ್ಲಿ ಮೂಡಿಬಂದಿರುವ ಲೇಡಿಸ್ ನಾಟ್ ಅಲೌಡ್ ಚಿತ್ರ ಇದೇ ಸೋಮವಾರ ಆನ್ ಲೈನ್ ನಲ್ಲಿ ಬಿಡುಗಡೆಯಾಗಿದೆ. 50 ರೂಪಾಯಿ ಪಾವತಿಸಿ ಆನ್’ಲೈನ್’ನಲ್ಲಿ ಶಕೀಲಾ ಚಿತ್ರವನ್ನು ಅಭಿಮಾನಿಗಳು ನೋಡಬಹುದಾಗಿದೆ.
ಕನ್ನಡ, ತೆಲುಗು, ತಮಿಳು ಸೆಮಿ ಪೋರ್ನ್ ಮಾದರಿಯ ಚಿತ್ರಗಳಲ್ಲಿ ನಟಿಸುತ್ತಿದ್ದ ಶಕೀಲಾ ಈಗ ಅಂತಹ ಚಿತ್ರ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ.
ಶಕೀಲಾ ಅಸ್ವಸ್ಥ; ಆಸ್ಪತ್ರೆಗೆ ದಾಖಲು
Follow Us