newsics.com
ನವದೆಹಲಿ: ಆಧಾರ್ ಕಾರ್ಡ್‌ನ ದುರ್ಬಳಕೆಯನ್ನು ತಡೆಯಲು ಕೇಂದ್ರ ಸರ್ಕಾರ ಹೊಸ ನಿಯಮ ಜಾರಿಗೊಳಿಸಿದೆ. ಅದುವೇ ಮುಖವಾಡದ ಆಧಾರ್ ಕಾರ್ಡ್.
ಅಂದರೆ ಸಾಮಾನ್ಯವಾಗಿ ಆಧಾರ್ ಕಾರ್ಡ್‌ನ ಜೆರಾಕ್ಸ್ ಪ್ರತಿಗಳನ್ನು ನೀಡುವಾಗ ಆಧಾರ್ ಕಾರ್ಡ್‌ನಲ್ಲಿರುವ 12 ಅಂಕೆ ಕಾಣಿಸುತ್ತದೆ. ಇನ್ಮುಂದೆ ಮುಖವಾಡದ ಆಧಾರ್ ಕಾರ್ಡ್‌ನಲ್ಲಿ 12 ಅಂಕಿ ಬದಲು ಕೊನೆಯ ನಾಲ್ಕು ಅಂಕೆಗಳು ಮಾತ್ರ ಕಾಣಿಸುವಂತೆ ಮಾಡಲು ಸೂಚಿಸಿದೆ.
ಇದನ್ನು UADAI ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಬಹುದು. ಅಲ್ಲದೆ, ಇ-ಆಧಾರ್ ಅನ್ನು ಸಾರ್ವಜನಿಕ ಕಂಪ್ಯೂಟರ್ ಬಳಸಿ ಡೌನ್‌ಲೋಡ್ ಮಾಡಿದ್ದರೆ, ಆ ಪ್ರತಿಗಳನ್ನು ಕಂಪ್ಯೂಟರ್‌ನಿಂದ ಸಂಪೂರ್ಣವಾಗಿ ಅಳಿಸಲು ಸೂಚಿಸಲಾಗಿದೆ.
ಯಾವುದೇ ವ್ಯಕ್ತಿ ಅಥವಾ ಸಂಸ್ಥೆಗೆ ಆಧಾರ್ ಕಾರ್ಡ್ ನೀಡಬೇಕಾದ ಸಂದರ್ಭದಲ್ಲಿ ಮುಖವಾಡದ ಆಧಾರ್ ಮಾತ್ರ ನೀಡಬೇಕು ಎಂದು ಕೇಂದ್ರ ಸೂಚಿಸಿದೆ.