ನವದೆಹಲಿ: ಬಾಕಿ ವೇತನ ಕೇಳಿದ್ದಕ್ಕೆ ಯುವತಿ ಮೇಲೆ ಪಾರ್ಲರ್ ಒಡತಿ ಸಾಕುನಾಯಿಯನ್ನು ಛೂಬಿಟ್ಟು ಗಾಯಗೊಳಿಸಿರುವ ಘಟನೆ ದಕ್ಷಿಣ ದೆಹಲಿಯ ಮಾಲ್ವಿಯನಗರದಲ್ಲಿ ನಡೆದಿದೆ.
ನಾಯಿ ದಾಳಿಯಿಂದ ಗಾಯಗೊಂಡಿರುವ ಯುವತಿ ಸ್ವಪ್ನಾಗೆ 15 ಕಡೆ ಹೊಲಿಗೆ ಹಾಕಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಾಯಾಳು ಯುವತಿಯನ್ನು ಮದನ್ ಮೋಹನ್ ಮಾಳವಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಆಕೆಯನ್ನು ಸಪ್ತರ್ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ವಪ್ನ ಎಂಬಾಕೆ ಬ್ಯೂಟಿಪಾರ್ಲರ್’ವೊಂದರಲ್ಲಿ ಕೆಲಸ ಮಾಡಿದ್ದು, ಲಾಕ್ಡೌನ್ ವೇಳೆ ಕೆಲಸ ತೊರೆದಿದ್ದರು. ಬಾಕಿ ಹಣವನ್ನು ನೀಡುವಂತೆ ಕೇಳಿದ್ದಾಗ ಕೊಡಲು ಬ್ಯೂಟಿಪಾರ್ಲರ್ ಒಡತಿ ನಿರಾಕರಿಸಿದ್ದರು. ಮತ್ತೊಮ್ಮೆ ಕೇಳಿದಾಗ ಕೊಡುವುದಾಗಿ ಮನೆಗೆ ಕರೆಸಿಕೊಂಡರು. ಹಣ ಸಿಗಬಹುದೆಂದು ಅವರ ಮನೆಗೆ ಹೋದರೆ ಸ್ವಲ್ಪ ಕೆಲಸ ಮಾಡು ಹಣ ಕೊಡುವೆ ಎಂದು ಸತಾಯಿಸಿದ್ದಾರೆ. ಕೆಲಸ ಮಾಡಲು ನಿರಾಕರಿಸಿದಾಗ ಪಾರ್ಲರ್ ಒಡತಿ ನೌಕರಳ ಮೇಲೆ ತಮ್ಮ ಸಾಕುನಾಯಿಯನ್ನು ಛೂ ಬಿಟ್ಟು ಕಚ್ಚಿಸಿದ್ದಾಳೆ ಗಾಯಾಳುವಿನ ಸಂಬಂಧಿಕರು ದೂರಿದ್ದಾರೆ.