ನವದೆಹಲಿ: ಪ್ರಮುಖ ಐಟಿ ಕಂಪನಿಯಾದ ಹೆಚ್ಸಿಎಲ್ ಟೆಕ್ನಾಲಜೀಸ್ ಶುಕ್ರವಾರ 2020-21ರ ಮೊದಲ ತ್ರೈಮಾಸಿಕ ವರದಿ ಪ್ರಕಟಿಸಿದ ಬೆನ್ನಲ್ಲೇ ಕಂಪನಿಯ ಅಧ್ಯಕ್ಷ ಸ್ಥಾನದಿಂದ ಶಿವ ನಾಡಾರ್ ನಿರ್ಗಮಿಸಿದ್ದಾರೆ.
ನಾಡರ್ ಅವರ ಮಗಳು ರೋಶ್ನಿ ನಾಡಾರ್ ಮಲ್ಹೋತ್ರಾ ಅವರ ನಂತರದ ಉತ್ತರಾಧಿಕಾರಿಯಾಗಲಿದ್ದಾರೆ. ಎಚ್ಸಿಎಲ್ ಟೆಕ್ನಾಲಜೀಸ್ ಏಪ್ರಿಲ್-ಜೂನ್ ತ್ರೈಮಾಸಿಕದ ನಿವ್ವಳ ಲಾಭ ಶೇ. 31.7ರಷ್ಟು ಏರಿಕೆಗೊಂಡು 2,935 ಕೋಟಿ ರೂ.ಗಳಷ್ಟಿದೆ ಎಂದು ಪ್ರಕಟಿಸಿತ್ತು. ಈ ಬೆನ್ನಲ್ಲೇ ಶಿವ ನಾಡಾರ್ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಿದ್ದಾರೆ.
ಜುಲೈ 17 ರಿಂದ ಜಾರಿಗೆ ಬರುವಂತೆ ಮಂಡಳಿಯ ಕಾರ್ಯನಿರ್ವಾಹಕ ನಿರ್ದೇಶಕರಾದ ರೋಶ್ನಿ ನಾಡಾರ್ ಮಲ್ಹೋತ್ರಾ ಅವರನ್ನು ನಿರ್ದೇಶಕರ ಮಂಡಳಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಿದೆ ಎಂದು ಎಚ್ಸಿಎಲ್ ಟೆಕ್ನಾಲಜೀಸ್ ತಿಳಿಸಿದೆ. ಶಿವ ನಾಡಾರ್ ಕಂಪನಿಯ ಮುಖ್ಯ ಕಾರ್ಯತಂತ್ರ ಅಧಿಕಾರಿಯಾಗಿ ಹುದ್ದೆಯೊಂದಿಗೆ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾಗಿ ಮುಂದುವರಿಯುವ ಸಾಧ್ಯತೆಯಿದೆ.
ಹೆಚ್ಸಿಎಲ್ ಟೆಕ್ನಾಲಜೀಸ್ ಅಧ್ಯಕ್ಷ ಸ್ಥಾನಕ್ಕೆ ಶಿವ ನಾಡಾರ್ ಗುಡ್ಬೈ
Follow Us