Thursday, August 18, 2022

ಡೆಲ್ಲಿಗೆ ಆಘಾತ; ಫೈನಲ್’ಗೆ ಮುಂಬೈ

Follow Us

newsics.com
ದುಬೈ: ಮೊದಲ ಕ್ವಾಲಿಫೈಯರ್‌ನಲ್ಲಿ ಮುಂಬೈ ಇಂಡಿಯನ್ಸ್ ಡೆಲ್ಲಿ ವಿರುದ್ಧ 57 ರನ್ನುಗಳ ಜಯಭೇರಿ ಬಾರಿಸಿ 2020ರ ಐಪಿಎಲ್‌ ಫೈನಲ್‌ ಪ್ರವೇಶಿಸಿದೆ.
ಗುರುವಾರ (ನ.6) ಡ್ಯಾಶಿಂಗ್‌ ಬ್ಯಾಟಿಂಗ್‌’ ಮಾಡಿ ಮುಂಬೈ 5 ವಿಕೆಟಿಗೆ ಭರ್ತಿ 200 ರನ್‌ ಸೇರಿಸಿದರೆ, ಡೆಲ್ಲಿ 8ಕ್ಕೆ 143 ರನ್‌ ಮಾಡಿತು. ಮೊದಲ ಕ್ವಾಲಿಫೈಯರ್‌ನಲ್ಲಿ ಆಘಾತ ಅನುಭವಿಸಿದ ಡೆಲ್ಲಿ ತಂಡ 2ನೇ ಕ್ವಾಲಿಫೈಯರ್‌ ಪಂದ್ಯದಲ್ಲಿ ಅದೃಷ್ಟ ಪರೀಕ್ಷಿಸಿಕೊಳ್ಳಬೇಕಿದೆ. ಟ್ರೆಂಟ್‌ ಬೌಲ್ಟ್ ಅವರ ಮೊದಲ ಓವರಿನಲ್ಲೇ ಡೆಲ್ಲಿಯ 2 ವಿಕೆಟ್‌ ಪತನವಾಯಿತು. ಖಾತೆ ತೆರೆಯುವ ಮೊದಲೇ 3ನೇ ವಿಕೆಟ್‌ ಪತನವಾಯಿತು. ಈ ಆಘಾತದಿಂದ ಡೆಲ್ಲಿ ಚೇತರಿಸಿಕೊಳ್ಳಲೇ ಇಲ್ಲ.
ಭರ್ಜರಿ ಬ್ಯಾಟಿಂಗ್‌ ಮುಂಬೈ ತಂಡದ ಸೂರ್ಯಕುಮಾರ್‌ ಯಾದವ್‌, ಇಶಾನ್‌ ಕಿಶನ್‌ ಅವರ ಅರ್ಧ ಶತಕ; ಡಿ ಕಾಕ್‌ ಮತ್ತು ಹಾರ್ದಿಕ್‌ ಪಾಂಡ್ಯ ಅವರ ಬಿರುಸಿನ ಬ್ಯಾಟಿಂಗ್‌ ಭಾರೀ ಮೊತ್ತಕ್ಕೆ ಕಾರಣವಾಯಿತು.
ಇಶಾನ್‌ ಕಿಶನ್‌ ಮತ್ತು ಹಾರ್ದಿಕ್‌ ಪಾಂಡ್ಯ 23 ಎಸೆತಗಳಲ್ಲಿ 60 ರನ್‌ ಸೂರೆಗೈದದ್ದು ಮುಂಬೈ ಸರದಿಯ ಹೈಲೈಟ್‌ ಆಗಿತ್ತು. ಕಿಶನ್‌ ಅಜೇಯ 55 (30 ಎಸೆತ, 4 ಬೌಂಡರಿ, 3 ಸಿಕ್ಸರ್‌), ಪಾಂಡ್ಯ ಕೇವಲ 14 ಎಸೆತಗಳಿಂದ ಅಜೇಯ 37 ರನ್‌ ಸಿಡಿಸಿದರು. ಇದರಲ್ಲಿ 5 ಸಿಕ್ಸರ್‌ ಸೇರಿತ್ತು. ಸ್ಯಾಮ್ಸ್‌ ಅವರ ಮೊದಲ ಓವರಿನಲ್ಲೇ 15 ರನ್‌ ಬಾರಿಸಿದ ಮುಂಬೈ ಸ್ಫೋಟಕ ಆಟದ ಸೂಚನೆ ನೀಡಿತ್ತು.

2 ವರ್ಷ ಸೋಶಿಯಲ್ ಮೀಡಿಯಾದಿಂದ ದೂರವಿರಲು ಕೋರ್ಟ್ ಸೂಚನೆ

ಶಬರಿಮಲೈ ಯಾತ್ರಿಕರಿಗೆ ಕೇರಳ ಸರ್ಕಾರದಿಂದ ಮಾರ್ಗಸೂಚಿ

ಭಾರತೀಯರಿಗೆ, ದೇಶದಲ್ಲಿನ ವಿದೇಶಿಯರಿಗೆ ಚೀನಾ ತಾತ್ಕಾಲಿಕ ನಿರ್ಬಂಧ

ಮತ್ತಷ್ಟು ಸುದ್ದಿಗಳು

vertical

Latest News

ಮಸೀದಿಯಲ್ಲಿ ಬಾಂಬ್ ಸ್ಫೋಟ: 21 ಮಂದಿ ಸಾವು, 40ಕ್ಕೂ ಹೆಚ್ಚು ಜನರಿಗೆ ಗಾಯ

newsics.com ಕಾಬೂಲ್‌(ಅಫ್ಘಾನಿಸ್ತಾನ): ಕಾಬೂಲ್‌ನಲ್ಲಿ ಮಸೀದಿಯೊಂದರ ಮೇಲೆ ಭಯೋತ್ಪಾದಕರು ಬಾಂಬ್ ದಾಳಿ ನಡೆಸಿದ್ದು, 21 ಜನ ಸಾವನ್ನಪ್ಪಿದ್ದಾರೆ. 40ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಕಾಬೂಲ್‌ನ ಖೈರ್ ಖಾನಾ ಪ್ರದೇಶದ ಮಸೀದಿಯಲ್ಲಿ...

ರಾಜ್ಯದಲ್ಲಿಂದು 886 ಹೊಸ ಕೊರೋನಾ ಸೋಂಕು ಪ್ರಕರಣ ಪತ್ತೆ, ಮೂವರ ಸಾವು

newsics.com ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಹೊಸದಾಗಿ 886 ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. ಇದೇ ಅವಧಿಯಲ್ಲಿ ಮೂವರು ಸೋಂಕಿತರು ಸಾವನ್ನಪ್ಪಿದ್ದಾರೆ. ಈ ಅವಧಿಯಲ್ಲಿ 1,999 ಸೋಂಕಿತರು ಗುಣಮುಖರಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 8,764ರಷ್ಟಾಗಿದೆ....

ವೃದ್ಧರಿಗೆಂದೇ ಇರುವ ಸ್ಟಾರ್ಟಪ್‌ನಲ್ಲಿ ರತನ್‌ ಟಾಟಾ ಹೂಡಿಕೆ

newsics.com ಬೆಂಗಳೂರು: ವೃದ್ಧರಿಗೆ ಜತೆಯಾಗಿದ್ದುಕೊಂಡು ಸೇವೆ ಸಲ್ಲಿಸಲೆಂದು ಆರಂಭವಾಗಿರುವ ಸ್ಟಾರ್ಟಪ್‌ ಕಂಪನಿಯಲ್ಲಿ ಹಿರಿಯ ಉದ್ಯಮಿ ರತನ್ ಟಾಟಾ ಹೂಡಿಕೆ ಮಾಡಲು ಮುಂದಾಗಿದ್ದಾರೆ. ದೇಶಾದ್ಯಂತ ಸುಮಾರು 5 ಕೋಟಿ ವೃದ್ಧರು ಸಂಗಾತಿಗಳಿಲ್ಲದೇ ಒಂಟಿಯಾಗಿದ್ದಾರೆ. ಅವರಿಗೆ ಈ ಕಂಪನಿ...
- Advertisement -
error: Content is protected !!