Saturday, April 17, 2021

ಆಕೆ ಅಸುನೀಗಿದ ಕೆಲ ಹೊತ್ತಿನಲ್ಲೇ ಶ್ವಾನ ಆತ್ಮಹತ್ಯೆ!

ನವದೆಹಲಿ: ಅನಾರೋಗ್ಯದಿಂದ ಬಳಲುತ್ತಿದ್ದಾಗ ತನ್ನನ್ನು ರಕ್ಷಿಸಿ ಸೇವೆ ಮಾಡಿದ ವೈದ್ಯೆ ಅನಾರೋಗ್ಯದಿಂದ ಸಾವನ್ನಪ್ಪಿದಾಗ ಮನನೊಂದ ಶ್ವಾನವೊಂದು ಆತ್ಮಹತ್ಯೆಗೆ ಶರಣಾದ ಘಟನೆ ನವದೆಹಲಿಯಲ್ಲಿ ನಡೆದಿದೆ.
ಜಯಾ ಎಂಬ ಹೆಸರಿನ ಸಾಕುನಾಯಿ ಮಹಡಿ ‌ಮೇಲಿಂದ‌ ಕೆಳಕ್ಕೆ ಹಾರಿ ಆತ್ಮಹತ್ಯೆಗೆ ಶರಣಾಗುವ ಮೂಲಕ ಅಚ್ಚರಿ ಮೂಡಿಸಿದೆ.
12 ವರ್ಷಗಳ ಹಿಂದೆ ಈ ನಾಯಿ ಕಜ್ಜಿಪೀಡಿತವಾಗಿ ಉತ್ತರ ಪ್ರದೇಶದ ಕಾನ್ಪುರ್ ರಸ್ತೆಯಲ್ಲಿ ಒದ್ದಾಡುತ್ತಿತ್ತು. ಈ ವೇಳೆ ಈ ನಾಯಿ ಮರಿಯನ್ನು ಕಂಡ ವೈದ್ಯೆ ಡಾ.ಅನಿತಾ ರಾಜ್‌ಸಿಂಗ್ ಅದನ್ನು ಉಪಚರಿಸಿ ಮನೆಗೆ ಕರೆತಂದು ಜಯಾ ಎಂದು ನಾಮಕರಣ ಮಾಡಿ ಸಾಕಿದ್ದರು.
ಕೆಲದಿನಗಳ ಹಿಂದೆ ಡಾ.ಅನಿತಾ ಮೂತ್ರಪಿಂಡ ವೈಫಲ್ಯದಿಂದ ಆಸ್ಪತ್ರೆಗೆ ‌ಸೇರಿದ್ದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ‌.
ಡಾ.ಅನಿತಾ ಆಸ್ಪತ್ರೆಗೆ ಸೇರಿದಾಗಿನಿಂದ ಆಹಾರ ತ್ಯಜಿಸಿದ್ದ ಶ್ವಾನ‌ ಅನಿತಾ ಅವರ ಮೃತದೇಹ ಕಂಡು ಕಣ್ಣೀರಿಟ್ಟಿದ್ದು ಜೋರಾಗಿ ಬೊಗಳಲು‌ ಆರಂಭಿಸಿದೆ.
ಡಾ.ಅನಿತಾ ಪುತ್ರ ಡಾ.ತೇಜಸ್ ವಿವರಿಸುವಂತೆ, ಬುಧವಾರ ಅಮ್ಮನ‌ ಮೃತದೇಹ ತಂದ ಕೂಡಲೇ‌ ಬೊಗಳಲು ಆರಂಭಿಸಿತು. ಬಳಿಕ ಮನೆಯ ಮಹಡಿ ಮೇಲಿಂದ ಹಾರಿ ಸಾವನ್ನಪ್ಪಿದೆ.
ಮಾಲೀಕರು ಅಥವಾ ಪ್ರೀತಿಪಾತ್ರರು ಸತ್ತಾಗ ಶ್ವಾನಗಳು ಆತ್ಮಹತ್ಯೆ ಗೆ ಶರಣಾಗುತ್ತಿರುವುದು ಇದೇ ಮೊದಲಲ್ಲ. ಸ್ಕಾಟ್ಲೆಂಡ್ ನ ಬಾಲಕ ಸ್ಟುವರ್ಟ್ ಹಚಿನ್ಸನ್ ಎಂಬ ಬಾಲಕ ಮೆದುಳು ಜ್ವರಕ್ಕೆ ಬಲಿಯಾದ ಕೆಲವೆ ನಿಮಿಷಗಳಲ್ಲಿ ಆತನ ಸಾಕುನಾಯಿ ಫ್ರೆಂಚ್‌ ಬುಲ್ ಡಾಗ್ ಆತ್ಮಹತ್ಯೆ ಮಾಡಿಕೊಂಡಿತ್ತು.ಇಂಥ ಸನ್ನಿವೇಶಗಳೇ ಸ್ವಾಮಿನಿಷ್ಠೆಗೆ ನಾಯಿ ಇನ್ನೊಂದು ಹೆಸರು ಎಂಬುದನ್ನು ಸಾಬೀತುಪಡಿಸುತ್ತವೆ.

ಮತ್ತಷ್ಟು ಸುದ್ದಿಗಳು

Latest News

ಆಸ್ಪತ್ರೆಗೆ ನುಗ್ಗಿ 850 ರೆಮಿಡಿಸಿವರ್ ಇಂಜೆಕ್ಷನ್ ಕಳ್ಳತನ

newsics.com ಭೋಪಾಲ್(ಮಧ್ಯಪ್ರದೇಶ): ಇಲ್ಲಿನ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ನುಗ್ಗಿದ ದುಷ್ಕರ್ಮಿಗಳು 850 ರೆಮಿಡಿಸಿವರ್ ಇಂಜೆಕ್ಷನ್ ಗಳನ್ನು ಕಳ್ಳತನ ಮಾಡಿದ್ದಾರೆ. ದೇಶದಲ್ಲಿ ಕೊರೋನಾ ಸೋಂಕು ಹೆಚ್ಚಾಗುತ್ತಿರುವ ನಡುವೆ ಕಾಳಸಂತೆಯಲ್ಲಿ ಔಷಧ...

ಕೇಂದ್ರ ಸಚಿವ ಕಿರೆನ್ ರಿಜಿಜುಗೆ ಕೊರೋನಾ ಸೋಂಕು

newsics.com ನವದೆಹಲಿ: ಕೇಂದ್ರ ಸಚಿವ ಕಿರೆನ್ ರಿಜಿಜು ಅವರಿಗೆ ಶನಿವಾರ ಕೊರೋನಾ ಸೋಂಕು ತಗುಲಿದೆ. ಈ ವಿಷಯವನ್ನು ಸ್ವತಃ ಸಚಿವ ಕಿರೆನ್ ರಿಜಿಜು ಅವರೇ ತಿಳಿಸಿದ್ದಾರೆ. ಟ್ವಿಟರ್ ನಲ್ಲಿ ಈ‌ ಮಾಹಿತಿ ಹಂಚಿಕೊಂಡಿರುವ ರಿಜಿಜು,...

ಕೊರೋನಾ ಸೋಂಕಿತರ ಚಿಕಿತ್ಸೆಗೆ ‌ಬಳಸುವ ರೆಮ್​ಡಿಸಿವಿರ್ ಇಂಜೆಕ್ಷನ್ ಬೆಲೆ ಇಳಿಕೆ

newsics.com ನವದೆಹಲಿ: ಕೊರೋನಾ ಸೋಂಕಿತ ರೋಗಿಗಳ ಚಿಕಿತ್ಸೆಗೆ ಬಳಸುವ ರೆಮ್​ಡಿಸಿವಿರ್ ಇಂಜೆಕ್ಷನ್ ಬೆಲೆಯನ್ನು ಫಾರ್ಮಾ ಕಂಪೆನಿಗಳು ‌ಸ್ವಪ್ರೇರಣೆಯಿಂದ ಇಳಿಕೆ ಮಾಡಿವೆ. ಕೆಡಿಲಾ ಕಂಪನಿಯು ತನ್ನ ರೆಮ್ಡೆಕ್ ಬ್ರಾಂಡಿನ ರೆಮ್ಡೆಸಿವಿರ್ ಬೆಲೆಯನ್ನು 2800 ರೂ.ನಿಂದ 899 ರೂಪಾಯಿಗೆ...
- Advertisement -
error: Content is protected !!