newsics.com
ಹ್ಯಾಂಗ್‌ಝೌ : ಷಾಟ್ ಪಟ್ ಪಟು ತಜಿಂದರ್ ಪಾಲ್ ಸಿಂಗ್ ತೂರ್ ಹಾಗೂ ಪುರುಷರ 3,000 ಮೀಟರ್ ಸ್ಟೀಪಲ್ ಚೇಸ್ ನಲ್ಲಿ ಅವಿನಾಶ್ ಸೇಬಲ್ ಚಿನ್ನದ ಪದಕ ಗೆದ್ದಿದ್ದಾರೆ.
ಏಷ್ಯನ್ ಗೇಮ್ಸ್ 2023ರಲ್ಲಿ ಭಾರತದ ಪದಕಗಳ ಭೇಟೆ ಮುಂದುವರೆದಿದ್ದು, ತನ್ನ ಮೊದಲ ಎರಡು ಪ್ರಯತ್ನಗಳಲ್ಲಿ ಫೌಲ್ ಮಾಡಿದ ಹೊರತಾಗಿಯೂ ಭಾನುವಾರ ನಡೆದ ಪುರುಷರ ಷಾಟ್ ಪಟ್ ಫೈನಲ್ ನಲ್ಲಿ ತಜಿಂದರ್ ಪಾಲ್ ಸಿಂಗ್ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ.
20.36 ಮೀಟರ್ ದೂರ ಎಸೆಯುವ ಮೂಲಕ ತಜೇಂದರ್ ಪಾಲ್ ಚಿನ್ನದ ಪದಕ ತಮ್ಮದಾಗಿಸಿಕೊಂಡರು. ಬ್ಯಾಕ್-ಟು-ಬ್ಯಾಕ್ ಚಿನ್ನದ ಪದಕಗಳೊಂದಿಗೆ ಗಮನಾರ್ಹ ಸಾಧನೆ ಮಾಡಿದ್ದಾರೆ.