newsics.com
ವಾಷಿಂಗ್ಟನ್: ಮಿಸ್ ವರ್ಲ್ಡ್ ಅಮೇರಿಕಾ 2021ನ್ನು ಶ್ರೀ ಸೈನಿ ಗೆದ್ದಿದ್ದು, ಈ ಗೌರವಕ್ಕೆ ಪಾತ್ರರಾದ ಮೊದಲ ಇಂಡೋ-ಅಮೆರಿಕನ್ ಆಗಿದ್ದಾರೆ.
ಲಾಸ್ ಏಂಜಲೀಸ್ ನ ಮಿಸ್ ವರ್ಲ್ಡ್ ಅಮೇರಿಕಾ ಪ್ರಧಾನ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಯಾನಾ ಹೇಡನ್ ಶ್ರೀ ಸೈನಿಗೆ ಮಿಸ್ ವರ್ಲ್ಡ್ ಅಮೇರಿಕಾ 2021ರ ಕ್ರೌನ್ ತೊಡಿಸಿದರು.
“ನನಗೆ ತುಂಬಾ ಸಂತೋಷವಾಗಿದೆ. ನನ್ನ ಭಾವನೆಗಳನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ. ಈ ಗೌರವಕ್ಕಾಗಿ ಮಿಸ್ ವರ್ಲ್ಡ್ ಅಮೇರಿಕಾಗೆ ನಾನು ಧನ್ಯವಾದ ಸಲ್ಲಿಸುತ್ತೇನೆ” ಎಂದು ಶ್ರೀ ಸೈನಿ ಗೆದ್ದ ಬಳಿಕ ಹೇಳಿದ್ದಾರೆ.
“ನಾನು ಮಿಸ್ ವರ್ಲ್ಡ್ ಅಮೇರಿಕಾ ಕಿರೀಟವನ್ನು ಪಡೆದ ಮೊದಲ ಭಾರತೀಯ ಮೂಲದವಳು ಹಾಗೂ ಮೊದಲ ಏಷ್ಯನ್” ಎಂದು ಶ್ರೀ ಸೈನಿ ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿದ್ದಾರೆ.