newsics.com
ಕೇರಳ: ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಮೊಬೈಲ್ ಕದ್ದ ಎಸ್ ಐ ಒಬ್ಬರು ಅದನ್ನು ಕೆಲ ದಿನಗಳ ಕಾಲ ಬಳಕೆ ಮಾಡಿರುವ ಘಟನೆ ಕೇರಳದ ಕೊಲ್ಲಂನಲ್ಲಿ ನಡೆದಿದೆ.
ಕನಿಯಾಪುರಂ ರೈಲ್ವೆ ನಿಲ್ದಾಣದ ಬಳಿಯಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದರು. ಸ್ಥಳಕ್ಕೆ ತೆರಳಿದ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಜ್ಯೋತಿ ಸುಧಾಕರ್, ಇದು ಆತ್ಮಹತ್ಯೆ ಪ್ರಕರಣವೆಂದು ದಾಖಲಿಸಿ ಕೇಸ್ ಕ್ಲೋಸ್ ಮಾಡಿದ್ದರು.
ಆದರೆ ಮೃತ ಸಂಬಂಧಿಕರೊಬ್ಬರು ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ, ಅವರ ಮೊಬೈಲ್ ಕಳವು ಆಗಿರುವ ಬಗ್ಗೆ ದೂರು ಸಲ್ಲಿಸಿದ್ದರು. ದೂರು ದಾಖಲಿಸಿಕೊಂಡಂತ ಸೈಬರ್ ಠಾಣೆ ಪೊಲೀಸರು ಮೊಬೈಲ್ ಟ್ರಾಕ್ ಮಾಡಿದಾಗ ಅದು ಎಸ್ ಐ ಜ್ಯೋತಿ ಸುಧಾಕರ್ ಬಳಿ ಇರುವುದು ತಿಳಿದುಬಂದಿದೆ.
ಮೃತ ವ್ಯಕ್ತಿಯ ಮೊಬೈಲ್ ಕದ್ದು, ಬಳಕೆ ಮಾಡಿದ್ದಕ್ಕಾಗಿ, ಎಸ್ ಐ ಜ್ಯೋತಿ ಸುಧಾಕರ್ ಇದೀಗ ಅಮಾನತುಗೊಂಡಿದ್ದಾರೆ.