newsics.com
ನವದೆಹಲಿ: ಪ್ಲಾಸ್ಟಿಕ್ ಕಪ್ ,ಪ್ಲೇಟ್ ಸೇರಿದಂತೆ ಏಕ ಬಳಕೆ ಅವುಗಳ ತಯಾರಿಕೆ, ಆಮದು, ದಾಸ್ತಾನು, ವಿತರಣೆ ಮತ್ತು ಮಾರಾಟವನ್ನು ನಿಷೇಧಿಸಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ.
2022ರ ಜುಲೈ 1 ರಿಂದ ಆದೇಶ ಜಾರಿಗೆ ಬರುವಂತೆ ಸೂಚಿಸಿದೆ.
ಪ್ಲಾಸ್ಟಿಕ್ ಕಡ್ಡಿಗಳು, ಪ್ಲಾಸ್ಟಿಕ್ ಧ್ವಜಗಳು, ಕ್ಯಾಂಡಿ ಕಡ್ಡಿಗಳು, ಐಸ್ – ಕ್ರೀಮ್ ಕಡ್ಡಿಗಳು, ಪ್ಲೇಟ್ ಗಳು, ಕಪ್ ಗಳು, ಚಮಚ, ಆಹ್ವಾನ ಪತ್ರಿಕೆ, ಸಿಗರೇಟ್ ಪ್ಯಾಕೇಟ್, ಅಥವಾ ಪಿವಿಸಿ ಬ್ಯಾನರ್ ಗಳು 100 ಮೈಕ್ರಾನ್ ಗಳಿಗಿಂತ ಕಡಿಮೆ ಇರಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.