newsics.com
ಕೋಟ್ಟಾಯಂ, ಕೇರಳ: ರಣ ಮಳೆಯಿಂದ ತತ್ತರಿಸಿರುವ ಕೇರಳದ ಕೋಟ್ಟಾಯಂ ಜಿಲ್ಲೆಯಲ್ಲಿ ಗುಡ್ಡ ಕುಸಿತ ಸಂಭವಿಸಿದೆ.ಗುಡ್ಡ ಕುಸಿದು ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದೆ. ಕೋಟ್ಟಾಯಂ ಜಿಲ್ಲೆಯಲ್ಲಿ ಇದೇ ರೀತಿ ಒಂದೇ ಕುಟುಂಬದ ಆರು ಮಂದಿ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಅವರನ್ನು ಹುಡುಕುವ ಪ್ರಯತ್ನ ಮುಂದುವರಿದಿದೆ.
ಅಮ್ಮ, ಮಗ, ಸೊಸೆ ಮತ್ತು ಅವರ ಮೂವರ ಮಕ್ಕಳು ಇದೀಗ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ.
ಎತ್ತರದಲ್ಲಿರುವ ಬೆಟ್ಟ ಮಳೆಯಿಂದಾಗಿ ಶಿಥಿಲಗೊಂಡು ಮಣ್ಣು ಸಮೇತ ನೀರಿನಲ್ಲಿ ಕೊಚ್ಚಿ ಹೋಗು ವೇಳೆ ಮನೆಯನ್ನು ಕೂಡ ಧ್ವಂಸ ಮಾಡುತ್ತಿದೆ