newsics.com
ಬಿಹಾರ: ಪಾಸ್ವರ್ಡ್ನಿಂದ ಆನ್ ಆಗುತ್ತೆ ಈ ಗ್ಯಾಸ್ ಸ್ಟವ್. ಈ ಡಿಜಿಟಲ್ ಯುಗದಲ್ಲಿ ಯಾವುದೂ ಅಸಾಧ್ಯವಲ್ಲ ಎಂದೇ ಹೇಳಬಹುದು. ಬಿಹಾರದ 13 ವರ್ಷದ ಪ್ರತ್ಯೂಷ್ ಎಂಬ ಬಾಲಕ ಅಸಾಧ್ಯವಾದುದನ್ನು ಸಾಧ್ಯವಾಗಿಸಿದ್ದಾರೆ.
ಈ ಗ್ಯಾಸ್ ಸ್ಟವ್‌ಗೆ ಪಾಸ್ವರ್ಡ್ನಿಂದ ಆನ್ ಆಗುತ್ತೆ. ಅಲಾರಂ ಸಹ ಇದೆ. ಅನಿಲ ಸೋರಿಕೆಯಾದಾಗ ಈ ಅಲಾರಂ ಬೀಪ್ ಆಗುತ್ತದೆ. ಅಲ್ಲದೇ, ಗ್ಯಾಸ್ ಲೀಕ್ ಆದರೆ ಅಡುಗೆಮನೆಯಲ್ಲಿ ಅಳವಡಿಸಿದ ಫ್ಯಾನ್ ಆನ್ ಆಗುತ್ತದೆ.
ಕೆಲವು ಸೆಕೆಂಡ್ ಗಳಿಗಿಂತ ಹೆಚ್ಚು ಕಾಲ ಗ್ಯಾಸ್ ಸೋರಿಕೆಯಾದರೆ ಇಡೀ ಮನೆಯ ವಿದ್ಯುತ್ ಕೂಡ ಸ್ವಯಂಚಾಲಿತವಾಗಿ ಸ್ಥಗಿತಗೊಳ್ಳುತ್ತದೆ. ಅಂದಹಾಗೆ ಈ ವಿಶೇಷ ಗ್ಯಾಸ್ ಸ್ಟವ್ಅನ್ನು ತಯಾರಿಸಲು ಪ್ರತ್ಯೂಷ್ ಅವರಿಗೆ ಸುಮಾರು 1,500 ರೂಪಾಯಿ ಖರ್ಚಾಗಿದೆ. ಆದರೆ ಮಾರುಕಟ್ಟೆಯಲ್ಲಿ 3,000 ರೂ.ವರೆಗೆ ಮಾರಾಟವಾಗುವ ನಿರೀಕ್ಷೆ ಇದೆ