newsics.com
ಕನ್ಯಾಕುಮಾರಿ: ಇತ್ತೀಚೆಗೆ ಕಾಳಿ ಮಾತೆಯ ಪೋಸ್ಟರ್ ವಿವಾದಕ್ಕೆ ಕಾರಣವಾಗಿತ್ತು. ಅದೇ ರೀತಿ ತಮಿಳುನಾಡಿನ ಕನ್ಯಾ ಕುಮಾರಿಯಲ್ಲಿ ಮದುವೆಗೆ ಶುಭ ಕೋರಿ ಹಾಕಲಾಗಿದ್ದ ಬ್ಯಾನರ್ ವಿವಾದದ ಕಿಡಿ ಹೊತ್ತಿಸಿದೆ. ಈ ಬ್ಯಾನರ್ ವೈರಲ್ ಆಗಿದೆ.
ಕನ್ಯಾಕುಮಾರಿ ಜಿಲ್ಲೆಯ ಅರೋಕಿಯಪುರಂ ಗ್ರಾಮದ ಪ್ರತೀಶ್ ಮದುವೆ ಇತ್ತೀಚೆಗೆ ನೆರವೇರಿತ್ತು. ಈ ವೇಳೆ ಸ್ನೇಹಿತರು ಶುಭ ಕೋರುವ ಬ್ಯಾನರ್ ಹಾಕಿದ್ದರು. ಅದರಲ್ಲಿ ಶಿವ ಸಿಗರೇಟ್ ಸೇದುತ್ತಿರುವ ಚಿತ್ರ ಪ್ರಿಂಟ್ ಮಾಡಿದ್ದರು.
ಇದಕ್ಕೆ ಹಿಂದೂ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿದ ಬಳಿಕ ಅದನ್ನು ತೆರವುಗೊಳಿಸಲಾಯಿತು. ವರ ಮತ್ತು ಆತನ ಗೆಳೆಯರಿಗೆ ಎಚ್ಚರಿಕೆ ನೀಡಿರುವ ಪೊಲೀಸರು ತಪ್ಪು ಮತ್ತೆ ಮಾಡದಂತೆ ಕಟ್ಟು ನಿಟ್ಟಿನ ಸೂಚನೆ ನೀಡಿದ್ದಾರೆ