Tuesday, January 19, 2021

ಚಿನ್ನ ಅಕ್ರಮ ಸಾಗಣೆ; ಏರ್ ಇಂಡಿಯಾ ಸಿಬ್ಬಂದಿ ಬಂಧನ

newsics.com
ನವದೆಹಲಿ: ಚಿನ್ನ ಕಳ್ಳ ಸಾಗಣೆ ಆರೋಪದಡಿ ಏರ್ ಇಂಡಿಯಾ ಸಿಬ್ಬಂದಿಯೊಬ್ಬರನ್ನು ಬಂಧಿಸಲಾಗಿದೆ.
ಸಾಗಣೆ ಮಾಡಲಾದ ಚಿನ್ನದ ಮೌಲ್ಯ ಸುಮಾರು 45 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಎರಡು ಗಂಟೆಗಳ ನಿರಂತರ ವಿಚಾರಣೆ ಬಳಿಕ ಏರ್ ಇಂಡಿಯಾ ಸಿಬ್ಬಂದಿಯೊಬ್ಬರನ್ನು ಬಂಧಿಸಲಾಗಿದೆ.
ಟೊರೆಂಟೋದಿಂದ ನವದೆಹಲಿಗೆ ಆಗಮಿಸಿದ ವಿಮಾನದಲ್ಲಿ ಅಕ್ರಮವಾಗಿ ಚಿನ್ನವನ್ನು ಸಾಗಣೆ ಮಾಡಲಾಗಿದೆ. ಭಾರತಕ್ಕೆ ಆಗಮಿಸಿದ ವಿಮಾನದಲ್ಲಿ ಬೆಳ್ಳಿ ಲೇಪಿತ ಎರಡು ಕಡಗಗಳನ್ನು ಅಕ್ರಮವಾಗಿ ಸಾಗಣೆ ಮಾಡಲಾಗಿದೆ.
ನವೆಂಬರ್ 22ರಂದು ದೆಹಲಿಯ ಇಂದಿರಾ ಗಾಂಧಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಏರ್ ಇಂಡಿಯಾ ವಿಮಾನದ ಕ್ಯಾಬಿನ್ ಸಿಬ್ಬಂದಿ ಬಂಧಿತ ಆರೋಪಿ ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ. ವಿಮಾನ ನಿಲ್ದಾಣ ದ್ವಾರದಲ್ಲಿ ಕಸ್ಟಮ್ಸ್ ಅಧಿಕಾರಿಗಳನ್ನು ಕಂಡ ಬಳಿಕ ಸಿಬ್ಬಂದಿ ವಿಮಾನದ ಸೀಟಿನ ಕೆಳಗೆ ಕಡಗಗಳನ್ನು ಬಚ್ಚಿಟ್ಟಿದ್ದ. ಅಧಿಕಾರಿಗಳ ವಿಚಾರಣೆ ಬಳಿಕ ವಿಮಾನದಲ್ಲಿದ್ದ ಅವುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಏರ್ ಇಂಡಿಯಾ ಒನ್ ವಿಮಾನದ ಚೊಚ್ಚಲ ಪ್ರಯಾಣ

ಬೆಂಗಳೂರು ವಿಮಾನ ನಿಲ್ದಾಣಕ್ಕಿನ್ನು ಹವಾಮಾನ ವೈಪರೀತ್ಯ ಸಮಸ್ಯೆ ಇಲ್ಲ

ಸಚಿವ ಸುರೇಶಕುಮಾರ್ ಹೇಳಿಕೆಗೆ ಕ್ಯಾಮ್ಸ್ ಕಿಡಿ; ಆನ್‍ಲೈನ್ ಕ್ಲಾಸ್ ಬಂದ್ ಎಚ್ಚರಿಕೆ

ಮತ್ತಷ್ಟು ಸುದ್ದಿಗಳು

Latest News

ಕಬ್ಬನ್’ಪಾರ್ಕ್’ನಲ್ಲಿ ಸ್ಮಾರ್ಟ್ ಸಿಟಿ ನಿರ್ಮಾಣ ಕಾರ್ಯ ಆರಂಭ

newsics.com ಬೆಂಗಳೂರು: ಸುಮಾರು ಒಂದು ವರ್ಷದ ನಂತರ ಕಬ್ಬನ್ ಪಾರ್ಕ್‌ನಲ್ಲಿ ಸ್ಮಾರ್ಟ್ ಸಿಟಿ ಕೆಲಸ ಭಾನುವಾರ (ಜ.17) ಪ್ರಾರಂಭವಾಗಿದೆ. ಸದ್ಯ ಉದ್ಯಾನವನದ ಮೂಲಕ 4 ಕಿ.ಮೀ ನಡಿಗೆ...

ಮಾರ್ಚ್‌ ಮೊದಲ ವಾರ ಬಜೆಟ್- ಸಿಎಂ

newsics.com ಕುಂದಾಪುರ(ಉಡುಪಿ): ಮಾರ್ಚ್‌ ಮೊದಲ ವಾರ ಬಜೆಟ್ ಮಂಡಿಸುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದರು.ಕುಂಭಾಶಿಯ ಆನೆಗುಡ್ಡೆ ದೇವಸ್ಥಾನದಲ್ಲಿ ಮಂಗಳವಾರ ಗಣಹೋಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಉಡುಪಿಯ ಧಾರ್ಮಿಕ ಪ್ರವಾಸದಲ್ಲಿ ಸಕಾಲಕ್ಕೆ...

ಸಸ್ಯಾಹಾರಿಗಳಿಗೆ ಕೊರೋನಾ ಸೋಂಕಿನ ಅಪಾಯ ಕಡಿಮೆ-ವರದಿ

newsics.com ನವದೆಹಲಿ: ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ (ಸಿಎಸ್ಐಆರ್) ತನ್ನ ಸುಮಾರು 40 ಸಂಸ್ಥೆಗಳಲ್ಲಿ ನಡೆಸಿದ ಹೊಸ ಸಮೀಕ್ಷೆಯಲ್ಲಿ, ಧೂಮಪಾನಿಗಳು ಮತ್ತು ಸಸ್ಯಾಹಾರಿಗಳಲ್ಲಿ ಕಡಿಮೆ ಸಿರೊಪೊಸಿಟಿವಿಟಿ ಹೊಂದಿರುವುದು ಕಂಡುಬಂದಿದ್ದು, ಅವರು ಕೊರೋನಾವೈರಸ್...
- Advertisement -
error: Content is protected !!