Tuesday, April 13, 2021

ಉತ್ತರಾಳ ಸಾವಿಗೆ ನಾಗರಹಾವಿನ ವಿಷ ಕಾರಣ ಎಂದ ಮರಣೋತ್ತರ ಪರೀಕ್ಷಾ ವರದಿ

ಕೊಲ್ಲಂ: ಪತಿ ಸೂರಜ್ ತನ್ನ ಪತ್ನಿ ಉತ್ತರಾಳನ್ನು ನಾಗರಹಾವಿನಿಂದ ಕಚ್ಚಿಸಿ ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಮರಣೋತ್ತರ ಪರೀಕ್ಷಾ ವರದಿ  ಪೊಲೀಸರ ಕೈ ಸೇರಿದೆ. ಹಾವಿನ ವಿಷ ಶರೀರಕ್ಕೆ ಪ್ರವೇಶಿಸಿದ ಕಾರಣ ಸಾವು ಸಂಭವಿಸಿದೆ ಎಂದು ವರದಿಯಲ್ಲಿ ಸ್ಪಷ್ಟಪಡಿಸಲಾಗಿದೆ. ಇದರಿಂದಾಗಿ ಸೂರಜ್ ವಿರುದ್ಧ ಪ್ರಬಲ ಸಾಕ್ಷ್ಯಾಧಾರ ಪೊಲೀಸರಿಗೆ ಲಭಿಸಿದೆ. ಬ್ಯಾಂಕ್ ನೌಕರನಾದ ಸೂರಜ್ ಎರಡನೆ ಮದುವೆ ಆಗಲು ತನ್ನ ಮೊದಲ ಪತ್ನಿಯನ್ನು ಹಾವಿನಿಂದ ಕಚ್ಚಿಸಿ ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಆರೋಪಿ ಸೂರಜ್ ನನ್ನು ಉತ್ತರಾಳ ಮನೆಗೆ ಕರೆದುಕೊಂಡು ಹೋಗಿ ಪೊಲೀಸರು ಪಂಚನಾಮೆ ಕೂಡ ನಡೆಸಿದ್ದಾರೆ. ಈ ಮೊದಲು ಉತ್ತರಾಳ ಮೇಲಿನ ದ್ವೇಷದಿಂದ ಹಾವು ಎರಡು ಬಾರಿ ಕಚ್ಚಿ ಆಕೆಯನ್ನು ಕೊಂದಿದೆ ಎಂದು ಹೇಳಲಾಗಿತ್ತು. ಇದು ದೇಶಾದ್ಯಂತ ಸಂಚಲನ ಮೂಡಿಸಿತ್ತು.

ಮತ್ತಷ್ಟು ಸುದ್ದಿಗಳು

Latest News

ಕುರಾನ್’ನಲ್ಲಿನ 26 ವಚನ ತೆಗೆಯಬೇಕೆಂಬ ಅರ್ಜಿ ವಜಾಗೊಳಿಸಿದ ಸುಪ್ರೀಂ

newsics.comನವದೆಹಲಿ: ಕುರಾನ್‌ನಲ್ಲಿನ 26 ವಚನಗಳನ್ನು ತೆಗೆಯುವಂತೆ ಕೋರಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.ಅರ್ಜಿಯು ಗಂಭೀರ ಉದ್ದೇಶ ಹೊಂದಿಲ್ಲ ಎಂಬ ಕಾರಣಕ್ಕೆ ಅರ್ಜಿದಾರರಿಗೆ 50...

ದೋಣಿ ಮುಳುಗಿ 34 ವಲಸಿಗರ ಸಾವು

newsics.comಜಿಬೂಟಿ: ವಲಸಿಗರನ್ನು ಹೊತ್ತ ದೋಣಿಯೊಂದು ಸಮುದ್ರದಲ್ಲಿ ಮುಳುಗಿ 34 ಮಂದಿ ಮೃತಪಟ್ಟಿದ್ದಾರೆ.ಆಫ್ರಿಕಾ ಖಂಡದ ಜಿಬೂಟಿ ದೇಶದ ಕರಾವಳಿಗೆ ಹೊಂದಿಕೊಂಡ ಪ್ರದೇಶದಲ್ಲಿ ಈ ದುರಂತ ಸಂಭವಿಸಿದೆ ಎಂದು ಅಂತಾರಾಷ್ಟ್ರೀಯ ವಲಸಿಗರ ಸಂಘಟನೆ...

ಮಹಾರಾಷ್ಟ್ರದಲ್ಲಿ 51,751 ಮಂದಿಗೆ ಕೊರೋನಾ ಸೋಂಕು 258 ಜನ‌ ಸಾವು

newsics.comಮುಂಬೈ: ಮಹಾರಾಷ್ಟ್ರದಲ್ಲಿ ಕಳೆದ 24 ಗಂಟೆಯಲ್ಲಿ 51,751 ಮಂದಿಗೆ ಕೊರೋನಾ ಸೋಂಕು ತಗುಲಿದ್ದು, 258 ಮಂದಿ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ.ಪ್ರಯೋಗಾಲಯಕ್ಕೆ ಬಂದಿದ್ದ 2,33,22,393 ಸ್ಯಾಂಪಲ್‌ಗಳ ಪೈಕಿ 34,58,996 ಮಂದಿಗೆ ಕೊರೋನಾ...
- Advertisement -
error: Content is protected !!