newsics.com
ನವದೆಹಲಿ: ಆರೋಗ್ಯ ತಪಾಸಣೆಗಾಗಿ ಕಾಂಗ್ರೆಸ್ ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ವಿದೇಶಕ್ಕೆ ತೆರಳಿದ್ದಾರೆ. ಜತೆಗೆ ರಾಹುಲ್ ಗಾಂಧಿಯವರೂ ತಾಯಿ ಸೋನಿಯಾಗೆ ಸಾಥ್ ನೀಡಿದ್ದಾರೆ.
ಕಾಂಗ್ರೆಸ್ ನ ವರಿಷ್ಠರಾದ ಸೋನಿಯಾ-ರಾಹುಲ್ ಅವರು ಎರಡು ವಾರ ಅವರು ವಿದೇಶದಲ್ಲಿರಲಿದ್ದಾರೆ ಎಂದು ಮೂಲಗಳು ಹೇಳಿವೆ.
ಇತ್ತೀಚೆಗೆ ಜುಲೈ 30ರಂದು ಸೋನಿಯಾ ಅವರನ್ನು ನವದೆಹಲಿಯ ಸರ್ ಗಂಗಾರಾಮ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರೋಗ್ಯ ಸಮಸ್ಯೆ ಹಿನ್ನೆಲೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೀಗಾಗಿ ನಿಗದಿತ ಆರೋಗ್ಯ ತಪಾಸಣೆಗಾಗಿ ಸೋನಿಯಾ ಅವರು ವಿದೇಶಕ್ಕೆ ತೆರಳಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಆದರೆ, ಸಂಸತ್ ಅಧಿವೇಶನ ಆರಂಭಕ್ಕೂ ಮುನ್ನ ಕಾಂಗ್ರೆಸ್ ನ ಇಬ್ಬರೂ ವಿದೇಶಕ್ಕೆ ತೆರಳಿರುವುದು ಹಲವರ ಅಚ್ಚರಿಗೆ ಕಾರಣವಾಗಿದೆ.
ವಿದೇಶಕ್ಕೆ ತೆರಳಿದ ಸೋನಿಯಾ; ಸಾಥ್ ನೀಡಿದ ರಾಹುಲ್
Follow Us