Wednesday, November 30, 2022

ಮಗನಿಗೆ 18 ವರ್ಷವಾದಾಕ್ಷಣ ತಂದೆಯ ಜವಾಬ್ದಾರಿ ಮುಗಿಯದು: ಹೈಕೋರ್ಟ್

Follow Us

newsics.com

ನವದೆಹಲಿ: ಮಗನಿಗೆ 18 ವರ್ಷ ತುಂಬಿದ ಕೂಡಲೆ ತಂದೆಯ ಜವಾಬ್ದಾರಿ ಮುಗಿಯುವುದಿಲ್ಲ ಎಂದು ದೆಹಲಿ ಹೈಕೋರ್ಟ್ ಹೇಳಿದೆ.

ಪ್ರಕರಣವೊಂದರ ವಿಚಾರಣೆ ವೇಳೆ ಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ವಿಚ್ಛೇದಿತ ಮಹಿಳೆಗೆ ಆತನ ಮಗನ ಪದವಿ ಮುಗಿಸುವವರೆಗೆ ಅಥವಾ ಆತ ಸಂಪಾದನೆ ಆರಂಭಿಸುವವರೆಗೆ 15 ಸಾವಿರ ರೂ. ಮಧ್ಯಂತರ ಜೀವನಾಂಶ ನೀಡಬೇಕೆಂದು ಆದೇಶ ನೀಡುವ ವೇಳೆ, ಮಗನಿಗೆ 18 ವರ್ಷ ತುಂಬಿದ ಕೂಡಲೇ ತನ್ನ ಮಗನ ಶಿಕ್ಷಣ ಮತ್ತು ಇತರ ಖರ್ಚುಗಳ ಸಂಪೂರ್ಣ ಹೊರೆ ತಾಯಿಯ ಮೇಲೆ ಮಾತ್ರ ಬೀಳಬಾರದು ಎಂದು ಹೇಳಿದೆ.

ಹೆಚ್ಚುತ್ತಿರುವ ಜೀವನ ವೆಚ್ಚದ ಈ ಸಮಯದಲ್ಲಿ ಪರಿತ್ಯಕ್ತ ಪತಿ ನೀಡಿದ ಅಲ್ಪ ಪ್ರಮಾಣದ ಜೀವನಾಂಶದಲ್ಲಿಯೇ ಪತ್ನಿ, ಮಗ ಮತ್ತು ಮಗಳ ಸಂಪೂರ್ಣ ಹೊಣೆಯನ್ನು ಹೊತ್ತುಕೊಳ್ಳಬೇಕು ಎಂದು ನಿರೀಕ್ಷಿಸುವುದು ಅಸಮಂಜಸವಾಗಿದೆ ಎಂದು ನ್ಯಾಯಾಲಯ ಹೇಳಿದೆ.

1997 ರ ನವೆಂಬರ್‌ನಲ್ಲಿ ವಿವಾಹವಾಗಿದ್ಧ ದಂಪತಿ ಇಬ್ಬರು ಮಕ್ಕಳನ್ನು ಹೊಂದಿದ್ದರು. ಅವರು ನವೆಂಬರ್ 2011 ರಲ್ಲಿ ವಿಚ್ಛೇದನ ಪಡೆದರು. ಮಗ ಮತ್ತು ಮಗಳಿಗೆ ಕ್ರಮವಾಗಿ 20 ಮತ್ತು 18 ವರ್ಷ ವಯಸ್ಸಾಗಿತ್ತು. ಇಬ್ಬರು ಮಕ್ಕಳು ತಾಯಿಯೊಂದಿಗೆ ವಾಸಿಸುತ್ತಿದ್ದಾರೆ. ಮಧ್ಯಂತರ ನಿರ್ವಹಣೆಯನ್ನು ನೀಡುವ ಉದ್ದೇಶವು ಆತನ ಹೆಂಡತಿ ಮತ್ತು ಮಕ್ಕಳು ಹಸಿವಿನಿಂದ ಬಳಲಬಾರದು ಎಂಬುದಾಗಿದೆ ಎಂದು ಕೋರ್ಟ್ ಹೇಳಿದೆ.

ಕಲ್ಲಿನಿಂದ ಹೊಡೆದು ಯುವ ಪ್ರೇಮಿಗಳಿಬ್ಬರ ಮರ್ಯಾದಾ ಹತ್ಯೆ, ಯುವತಿಯ ತಂದೆಯಿಂದಲೇ ಕೃತ್ಯ

20 ಸಚಿವರ ನೇಮಕ ಅಸಿಂಧು ಎಂದ ಸುಪ್ರೀಂ ಕೋರ್ಟ್; ನೇಪಾಳ‌ ರಾಜಕೀಯ ಬಿಕ್ಕಟ್ಟು ಮತ್ತಷ್ಟು ಜಟಿಲ

ರಾಜ್ಯದಲ್ಲಿ ಮೊದಲ ಡೆಲ್ಟಾ ಪ್ಲಸ್ ವೈರಸ್ ಪತ್ತೆ

ಸೆಪ್ಟೆಂಬರ್’ನಲ್ಲಿ 2 ವರ್ಷ ಮೇಲ್ಪಟ್ಟ ಮಕ್ಕಳಿಗೆ ಲಸಿಕೆ: ಏಮ್ಸ್ ಮುಖ್ಯಸ್ಥ ವಿಶ್ವಾಸ

ಮತ್ತಷ್ಟು ಸುದ್ದಿಗಳು

vertical

Latest News

KSRTC ಬಸ್‌ಗಳಿಗೆ ಹೆಸರು, ಬ್ರ್ಯಾಂಡ್‌ ಸೂಚಿಸಿ ಬಹುಮಾನ ಗೆಲ್ಲಿ

newsics.com ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ನೂತನವಾಗಿ ಬಸ್‌ಗಳಿಗೆ ಹೆಸರು, ಬ್ರ್ಯಾಂಡ್‌ ಸೂಚಿಸಿ  ಬಹುಮಾನ ಗೆಲ್ಲ  ಬಹುದಾಗಿದೆ. ಮಲ್ಟಿ ಆ್ಯಕ್ಸೆಲ್ ಸ್ಲೀಪರ್ ಹಾಗೂ ವಿದ್ಯುತ್ ಚಾಲಿತ...

ವಿಚಿತ್ರ ಹಬ್ಬದ ಆಚರಣೆ- ಕಲ್ಲಿನ ಬಂಡೆಗೆ ಡಿಕ್ಕಿ ಹೊಡೆದು ದೇವರಿಗೆ ನಮಸ್ಕಾರ

newsics.com ವಿಜಯಪುರ: ಜಿಲ್ಲೆಯ ನಿಡಗುಂದಿ ತಾಲೂಕಿನ ಗಣಿ ಗ್ರಾಮದ ಸೋಮೇಶ್ವರ ದೇವರ ಜಾತ್ರೆಯಲ್ಲಿ ಕಲ್ಲಿನ ಬಂಡೆಗೆ ಡಿಕ್ಕಿ ಹೊಡೆದು ದೇವರಿಗೆ ನಮಸ್ಕಾರ ಮಾಡುವ ವಿಶಿಷ್ಟ ಆಚರಣೆ ಕಂಡು ಬರುತ್ತದೆ. ಪ್ರತಿವರ್ಷ ಛಟ್ಟಿ ಅಮವಾಸ್ಯೆಯ ಆಸುಪಾಸು ನಡೆಯುವ...

20ಕ್ಕೂ ಹೆಚ್ಚು ಯುವತಿಯರ ಜತೆ ಅಪ್ತಾಭ್ ಸಂಬಂಧ?

newsics.com ನವದೆಹಲಿ:  ಶ್ರದ್ಧಾ ಹತ್ಯೆ ಪ್ರಕರಣದ ಆರೋಪಿ ಅಪ್ತಾಭ್ 20ಕ್ಕೂ ಹೆಚ್ಚು ಯುವತಿಯರ ಜತೆ ಸಂಬಂಧ ಹೊಂದಿರುವ ಅಂಶ ತನಿಖೆ ವೇಳೆ ಬೆಳಕಿಗೆ ಬಂದಿದೆ ಎಂದು ವರದಿಯಾಗಿದೆ. ಪೊಲೀಸ್ ತನಿಖೆಯಲ್ಲಿ ಈ ಅಂಶ ಬಯಲಾಗಿದೆ. ಕೇವಲ...
- Advertisement -
error: Content is protected !!