newsics.com
ಎಸ್.ಪಿ.ಬಾಲಸುಬ್ರಹ್ಮಣ್ಯಂ ಎಂಥೆಂಥ ಮೃಧುರಾತಿಮಧುರ ಹಾಡುಗಳನ್ನು ಹಾಡಿ ಜನಮನದಲ್ಲಿ ನೆಲೆಯಾಗಿದ್ದಾರೆ. ಆದರೆ, ಅವರು ಯಾವುದೇ ಸಂಗೀತ ಗುರುಗಳಲ್ಲೂ ಶಾಸ್ತ್ರೀಯವಾಗಿ ಸಂಗೀತ ಕಲಿತಿರಲಿಲ್ಲ ಎನ್ನುವುದು ಅಚ್ಚರಿದಾಯಕ ಸಂಗತಿ. ಅವರೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಂತೆ ಹಾಡುವವರೆಲ್ಲ ಅವರ ಗುರುಗಳಾಗಿದ್ದರು. ಅವರ ದನಿಗೆ ಮಾರುಹೋಗದ ಸಂಗೀತಪ್ರಿಯರಿಲ್ಲ. ಸುಮಾರು 30 ದಶಕಗಳಿಗೂ ಹೆಚ್ಚು ಕಾಲ ದಕ್ಷಿಣ ಭಾರತದ ಸಂಗೀತ ನಿರ್ದೇಶಕರಿಗೆ ಅತ್ಯಂತ ಪ್ರೀತಿಪಾತ್ರ ಗಾಯಕರಾಗಿದ್ದರು. ವಿಷ್ಣುವರ್ಧನ್, ಅನಂತ್ ನಾಗ್, ಶಂಕರ್ ನಾಗ್, ಶ್ರೀನಾಥ್ ಮುಂತಾದ ಪ್ರಮುಖ ಎಲ್ಲ ಕಲಾವಿದರ ಶಾರೀರವಾಗಿದ್ದವರು ಎಸ್.ಪಿ.ಬಿ. ಕನ್ನಡ ಮಾತ್ರವಲ್ಲ, ತಮಿಳಿನಲ್ಲಿ ಕಮಲಹಾಸನ್ ಹಾಗೂ ರಜನೀಕಾಂತ್, ಆರಂಭದ ದಿನಗಳಲ್ಲಿ ಸಲ್ಮಾನ್ ಖಾನ್, ಮಲಯಾಳಂನಲ್ಲಿ ಮೋಹನ್ ಲಾಲ್ ಅವರಿಗೆ ಎಸ್.ಪಿ.ಬಿ. ದನಿಯಾಗಿದ್ದರು.
SPB ಜನ್ಮಜಾತ ಗಾಯಕ
Follow Us