newsics.com
ಪ್ರಪಂಚದ ಯಾವುದೇ ಗಾಯಕ ಹಾಡಿರದಷ್ಟು ಹಾಡುಗಳನ್ನು ಹಾಡಿರುವ ಕಲಾವಿದ ಎಸ್.ಪಿ.ಬಿ. ಹುಟ್ಟಿದ್ದು ಆಂಧ್ರವಾದರೂ ಕನ್ನಡದ ಮನೆಮಗ ಎನ್ನುವಷ್ಟು ಕನ್ನಡಿಗರಿಗೆ ಆಪ್ತರಾದವರು. ದಾಖಲೆ ನಿರ್ಮಿಸಿದ್ದ ಎಸ್.ಪಿ.ಬಿ. ಹಾಡಿರುವ ಗೀತೆಗಳ ಸಂಖ್ಯೆ ಎಷ್ಟು ಗೊತ್ತೇ? 40 ಸಾವಿರಕ್ಕೂ ಅಧಿಕ! ಭಾರತದ ಬರೋಬ್ಬರಿ 17 ಭಾಷೆಗಳಲ್ಲಿ ಎಸ್.ಪಿ.ಬಿ. ಹಾಡಿದ್ದಾರೆ.
ಚಿತ್ರಗೀತೆಗಳ ಜತೆಗೆ ಹಾಡಿದ ದೇವರನಾಮ, ಭಾವಗೀತೆಗಳಿಗೆ ಲೆಕ್ಕವಿಲ್ಲ. ಇದರೊಂದಿಗೆ ಕಿರುತೆರೆಯಲ್ಲಿ ಸಾವಿರಾರು ಎಪಿಸೋಡುಗಳನ್ನೂ ನಡೆಸಿಕೊಟ್ಟಿದ್ದಾರೆ. ಅವರ ನೇತೃತ್ವದ ಕನ್ನಡದ “ಎದೆತುಂಬಿ ಹಾಡಿದೆನು’ ಜನಪ್ರಿಯತೆ ಹೊಂದಿತ್ತು. ಅವರಿಗೆ ಸಂದ ಪ್ರಶಸ್ತಿಗಳು ಅನೇಕ. ಪದ್ಮಶ್ರೀ, ಪದ್ಮಭೂಷಣ, ಆರು ರಾಷ್ಟ್ರ ಪ್ರಶಸ್ತಿಗಳು, ಕರ್ನಾಟಕ, ಆಂಧ್ರ, ತಮಿಳುನಾಡು ರಾಜ್ಯ ಸರ್ಕಾರಗಳಿಂದ ಒಟ್ಟು 23 ಪ್ರಶಸ್ತಿಗಳು ಬಂದಿವೆ. ನಾಲ್ಕು ವಿಶ್ವವಿದ್ಯಾನಿಲಯಗಳಿಂದ ನಾಲ್ಕು ಡಾಕ್ಟರೇಟ್ ಗೌರವಕ್ಕೂ ಪಾತ್ರರಾಗಿದ್ದರು.
ದಾಖಲೆಯ ಸರದಾರ…
8 ಫೆಬ್ರವರಿ 1981ರಂದು ಉಪೇಂದ್ರಕುಮಾರ್ ಸಂಯೋಜನೆಯಲ್ಲಿ ಒಂದೇ ದಿನ 21 ಹಾಡುಗಳ ಧ್ವನಿ ಮುದ್ರಣ, ಇನ್ನೊಂದು ದಿನ 16, ಮತ್ತೊಂದು ದಿನ ಆಗಿನ ಮದ್ರಾಸ್’ನಲ್ಲಿ 19 ಗೀತೆಗಳನ್ನು ಹಾಡಿದ್ದ ಸಾಹಸಿಗ. ಒಂದೇ ದಿನದಲ್ಲಿ ಕನ್ನಡದ 17 ಹಾಡುಗಳ ರೆಕಾರ್ಡ್ ಮಾಡಿದ ಏಕೈಕ ಕಲಾವಿದ ಎಸ್.ಪಿ.ಬಿ. ಅಷ್ಟೇ ಅಲ್ಲ, ಒಂದೇ ದಿನದಲ್ಲಿ ತೆಲುಗು ಹಾಗೂ ತಮಿಳಿನಲ್ಲಿ 19 ಹಾಡುಗಳನ್ನು ಹಾಡಿದ್ದರು. ಹಿಂದಿ ಭಾಷೆಯಲ್ಲಿ ಒಂದೇ ದಿನ 16 ಹಾಡುಗಳನ್ನು ರೆಕಾರ್ಡ್ ಮಾಡಿದ ಹಿನ್ನೆಲೆ ಗಾಯಕ ಎಂದರೆ ಎಸ್. ಪಿ. ಬಾಲಸುಬ್ರಹ್ಮಣ್ಯಂ.
ದಾಖಲೆಯ ಸರದಾರ… ಒಂದೇ ದಿನ 21 ಹಾಡಿಗೆ SPB ಧ್ವನಿ…!
Follow Us