ನವದೆಹಲಿ: ವಿಧಾನಸಭಾ ಸದಸ್ಯರ ವಿರುದ್ದ ಸಲ್ಲಿಸಲಾಗುವ ಅನರ್ಹತೆ ಅರ್ಜಿಗಳ ಬಗ್ಗೆ ತೀರ್ಮಾನ ಕೈಗೊಳ್ಳುವ ಸ್ಪೀಕರ್ ಅಧಿಕಾರವನ್ನು ಸಂಸತ್ತು ಮರು ಪರಿಶೀಲಿಸಬೇಕು ಎಂದು ಸುಪ್ರೀಂಕೋರ್ಟ್ ಸಲಹೆ ನೀಡಿದೆ. ಸ್ಪೀಕರ್ ಕೂಡ ಒಂದು ರಾಜಕೀಯ ಪಕ್ಷಕ್ಕೆ ಸೇರಿದ ವ್ಯಕ್ತಿಯಾದ ಕಾರಣ ತಮ್ಮ ಸಲಹೆಯನ್ನು ಸಂಸತ್ತು ಪರಿಗಣನೆಗೆ ತೆಗೆದುಕೊಂಡು, ಶಾಸಕರ ವಿರುದ್ಧ ಅನರ್ಹತೆ ಅರ್ಜಿಗಳನ್ನು ಇತ್ಯರ್ಥಪಡಿಸಲು ಸ್ವಾಯತ್ತ ವ್ಯವಸ್ಥೆಯನ್ನು ರೂಪಿಸಬೇಕು ಎಂದು ನ್ಯಾಯಪೀಠ ಸಲಹೆ ನೀಡಿದೆ.
ಮಣಿಪುರ ಕಾಂಗ್ರೆಸ್ ಶಾಸಕ ಹಾಗೂ ಅರಣ್ಯ ಸಚಿವ ಶ್ಯಾಂ ಕುಮಾರ್ ಅವರ ವಿಧಾನಸಭಾ ಸದಸ್ಯತ್ವವನ್ನು ಅನರ್ಹಗೊಳಿಸುವಂತೆ ಕೋರಿ ಕಾಂಗ್ರೆಸ್ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಈ ಸೂಚನೆ ನೀಡಿದೆ.
ಸ್ಪೀಕರ್ ಅಧಿಕಾರವನ್ನು ಮರು ಪರಿಶೀಲಿಸಬೇಕು ; ಸುಪ್ರೀಂ
Follow Us