Saturday, December 10, 2022

‘ಸ್ಪೆಷಲ್ 26’ ಸಿನಿಮಾ ಸ್ಫೂರ್ತಿ: ಉದ್ಯಮಿಗೆ 20 ಕೋಟಿ ವಂಚನೆ ಯತ್ನ, 9 ಮಂದಿ‌ ಬಂಧನ

Follow Us

newsics.com
ನವದೆಹಲಿ: ಬಾಲಿವುಡ್ ನಟ ಅಕ್ಷಯ್ ಕುಮಾರ್ ನಟನೆಯ ಸ್ಪೆಷಲ್-26 ರೀತಿಯಲ್ಲಿಯೇ ಜಾರಿ ನಿರ್ದೇಶನಾಲಯದ(ಇಡಿ) ಹೆಸರಲ್ಲಿ ಮುಂಬೈ ಮೂಲದ ಉದ್ಯಮಿಯೊಬ್ಬರಿಂದ 20 ಕೋಟಿ ರೂ. ಸುಲಿಗೆಗೆ ಯೋಜಿಸಿದ್ದ ಪ್ರಕರಣವೊಂದು ಬೆಳಕಿಗೆ ಬಂದಿದೆ.

ನಿಪ್ಪಾನ್ ಪೇಂಟ್‌ ಅಧ್ಯಕ್ಷ ಮುಂಬೈ‌ ಮೂಲದ ಹರ್ದೇವ್ ಸಿಂಗ್ ಅವರನ್ನು ವಂಚಿಸಲು ಯತ್ನಿಸಿದ್ದ ಒಂಬತ್ತು ಮಂದಿಯ ಖತರ್ನಾಕ್ ಗ್ಯಾಂಗ್ ಅನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಇನ್ನೂ ಕೆಲವರನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ದಿಲ್ಲಿ ವಿಶೇಷ ಪೊಲೀಸ್ ಆಯುಕ್ತ ರವೀಂದ್ರ ಸಿಂಗ್ ಯಾದವ್ ತಿಳಿಸಿದ್ದಾರೆ.
ಅಖಿಲೇಶ್ ಮಿಶ್ರಾಘಿ, ದರ್ಶನ್ ಹರೀಶ್ ಜೋಶಿ, ವಿನೋದ್ ಕುಮಾರ್ ಪಟೇಲ್, ‘ಮೇಂದ್ರ ಕುಮಾರ್ ಗಿರಿ, ನರೇಶ್ ಮಹತೊ, ಅಸ್ರರ್ ಅಲಿ, ವಿಷ್ಣು ಪ್ರಸಾದ್, ದೇವೇಂದ್ರ ಕುಮಾರ್ ದುಬೆ ಮತ್ತು ಗಜೇಂದ್ರ ಅಲಿಯಾಸ್ ಗುಡ್ಡು ಬಂಧಿತ ಆರೋಪಿಗಳು.

ಈ ಗ್ಯಾಂಗ್ ಮೊದಲಿಗೆ ಎರಡು ನಕಲಿ ನೋಟಿಸ್ ಕಳುಹಿಸಿದೆ. ಫೆಡರಲ್ ಏಜೆನ್ಸಿ ನಿನ್ನ ವಿರುದ್ಧ ಪ್ರಕರಣ ದಾಖಲಿಸಿದೆ ಎಂದು ಹರ್ದೇವ್ ಸಿಂಗ್ ಅವರಿಗೆ ಮನವರಿಕೆ ಮಾಡಿದೆ. ಹರ್ದೇವ್ ಸಿಂಗ್ ಸ್ಪೀಡ್ ಪೋಸ್ಟ್ ಮೂಲಕ ನಕಲಿ ನೋಟಿಸ್‌ಗಳನ್ನು ಸ್ವೀಕರಿಸಿದ್ದು, ಇದರಿಂದ ಮುಕ್ತಿ ನೀಡುವಂತೆ ಆರೋಪಿಯನ್ನು ಸಂಪರ್ಕಿಸಿದಾಗ ಅವರು ಮೊದಲಿಗೆ 2-3 ಕೋಟಿ ರೂ. ಬೇಡಿಕೆಯಿಟ್ಟಿದ್ದಾರೆ. ದಿಲ್ಲಿಯಲ್ಲಿ ಭೇಟಿಯಾಗುವಂತೆಯೂ ಹೇಳಿದ್ದಾರೆ.
ನವೆಂಬರ್ 11 ರಂದು, ಹರ್ದೇವ್ ಸಿಂಗ್ ಮೊತ್ತವನ್ನು ಕಡಿಮೆ ಮಾಡಲು ಆರೋಪಿಗಳೊಂದಿಗೆ ಮಾತುಕತೆ ನಡೆಸಲು ಪ್ರಯತ್ನಿಸಿದ್ದಾರೆ. ಆದರೆ ಸಮಸ್ಯೆಯನ್ನು ಇತ್ಯರ್ಥಗೊಳಿಸಲು ಖುದ್ದಾಗಿ ಭೇಟಿಯಾಗುವಂತೆ ಹೇಳಿದ್ದಾರೆ. ಮರುದಿನ, ಹರ್ದೇವ್ ಸಿಂಗ್ ಮುಂಬೈ ವಿಮಾನ ನಿಲ್ದಾಣದಲ್ಲಿ ಇಬ್ಬರು ಆರೋಪಿಗಳನ್ನು ಭೇಟಿಯಾಗಿದ್ದಾರೆ. ನಿಮ್ಮ (ಹರ್ದೇವ್ ಸಿಂಗ್) ಸಾವಿರಾರು ಕೋಟಿ ಮೌಲ್ಯದ ಅಕ್ರಮ ಆಸ್ತಿಯನ್ನು ಪತ್ತೆ ಮಾಡಿದೆ ಎಂದು ನಕಲಿ ಇಡಿ ಅಕಾರಿಗಳು ಹೇಳಿದ್ದಾರೆ. ಇದನ್ನು 2-3 ಕೋಟಿಗಳಲ್ಲಿ ಇತ್ಯರ್ಥಪಡಿಸಬಹುದು. ಅದರೆ ದೆಹಲಿಯಲ್ಲಿ ಏಕಾಏಕಿ 20 ಕೋಟಿ ರೂ. ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಇದರಿಂದ ಅನುಮಾನಗೊಂಡ ಉದ್ಯಮಿ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಶಿಕ್ಷಕರ ನೇಮಕಾತಿ: 13,363 ಅಭ್ಯರ್ಥಿಗಳ ತಾತ್ಕಾಲಿಕ ಪಟ್ಟಿ ಪ್ರಕಟ

ಮತ್ತಷ್ಟು ಸುದ್ದಿಗಳು

vertical

Latest News

16ನೇ ವಯಸ್ಸಿನಲ್ಲಿ ಎಂ ಎ ಪದವಿ :ಹೈದರಾಬಾದ್ ವಿದ್ಯಾರ್ಥಿ ದಾಖಲೆ

newsics.com ಹೈದರಾಬಾದ್: 16ನೇ ವಯಸ್ಸಿನಲ್ಲಿ ಸ್ನಾತಕೋತ್ತರ ಪದವಿ ಪಡೆಯುವ ಮೂಲಕ ಹೈದರಾಬಾದ್ ನ ವಿದ್ಯಾರ್ಥಿ ಹೊಸ ದಾಖಲೆ ಬರೆದಿದ್ದಾನೆ. ಭಾರತದ ಅತ್ಯಂತ ಕಿರಿಯ ಎಂ ಎ ಪದವೀಧರ...

ಮಾಂಡೌಸ್ ಚಂಡಮಾರುತ ಎಫೆಕ್ಟ್: ಚೆನ್ನೈನಲ್ಲಿ ಭಾರೀ ಮಳೆ, ಉರುಳಿದ ಮರಗಳು

newsics.com ಚೆನ್ನೈ:  ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ಮಾಂಡೌಸ್ ಚಂಡಮಾರುತದ ಪರಿಣಾಮ ಚೆನ್ನೈ ಸೇರಿದಂತೆ ತಮಿಳುನಾಡಿನ ಹಲವೆಡೆ ಭಾರೀ ಮಳೆಯಾಗುತ್ತಿದೆ.  ಚೆನ್ನೈನ ಎಗ್ಮೋರ್  ಪ್ರದೇಶದಲ್ಲಿ   ಭಾರೀ ಗಾಳಿಯಿಂದಾಗಿ ಹಲವು ಮರಗಳು  ನೆಲಕ್ಕೆ ಅಪ್ಪಳಿಸಿವೆ. ಎಡೆಬಿಡದೆ ಮಳೆ ಸುರಿಯುತ್ತಿದೆ. ...

ಮನೆಗೆ ನುಗ್ಗಿ ಯುವತಿಯ ಅಪಹರಣ, ದಾಂಧಲೆ: 100 ಯುವಕರ ಕೃತ್ಯ

newsics.com ಹೈದರಾಬಾದ್: ತೆಲಂಗಾಣದ ರಂಗಾ ರೆಡ್ಡಿ ಜಿಲ್ಲೆಯಲ್ಲಿ ಮಹಿಳೆಯೊಬ್ಬರನ್ನು ಮನೆಗೆ ನುಗ್ಗಿ ಅಪಹರಿಸಲಾಲಿಗೆದ.  ನೂರು ಮಂದಿ ಯುವಕರ ತಂಡ ಮನೆಗೆ ನುಗ್ಗಿ ಮಗಳನ್ನು ಅಪಹರಿಸಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ. ಅಪಹರಣಕ್ಕೆ ಒಳಗಾದ ಯುವತಿಯನ್ನು ವೈಶಾಲಿ ಎಂದು...
- Advertisement -
error: Content is protected !!