Monday, November 29, 2021

ಆಧ್ಯಾತ್ಮಿಕ ಗಾಯಕ ನಿರ್ಮಲ್ ಸಿಂಗ್ ಕೊರೋನಾಗೆ ಬಲಿ

Follow Us

ಅಮೃತಸರ್: ಕೊರೋನಾ ಸೋಂಕಿನಿಂದ ಪದ್ಮಶ್ರೀ ಪುರಸ್ಕೃತ ಸಿಖ್ ಆಧ್ಯಾತ್ಮಿಕ ಗಾಯಕ ನಿರ್ಮಲ್ ಸಿಂಗ್ (62) ಗುರುವಾರ ಬೆಳಗ್ಗೆ ಅಮೃತಸರ್ ನಗರದ ಆಸ್ಪತ್ರೆಯಲ್ಲಿ ನಿಧನರಾದರು.
ಪಂಜಾಬ್ ರಾಜ್ಯದಲ್ಲಿ ಕೋವಿಡ್-19 ನಿರ್ವಹಣೆಗಾಗಿ ನೇಮಕಗೊಂಡಿರುವ ಹಿರಿಯ ಅಧಿಕಾರಿ ಕೆ ಬಿ ಎಸ್ ಸಿದ್ದು ಈ ಮಾಹಿತಿ ನೀಡಿದ್ದಾರೆ.
ಅಮೃತಸರ್ ಸ್ವರ್ಣಮಂದಿರದ ಮಾಜಿ ಹಝೂರಿ ಆಗಿದ್ದ ನಿರ್ಮಲ್ ಸಿಂಗ್ ಅವರನ್ನು ಬುಧವಾರ ವೆಂಟಿಲೇಟರ್ ನಲ್ಲಿರಿಸಲಾಗಿತ್ತು. ಇತ್ತೀಚೆಗಷ್ಟೇ ವಿದೇಶ ಪ್ರವಾಸದಿಂದ ವಾಪಸಾಗಿದ್ದ ಅವರು ನಂತರ ದಿಲ್ಲಿ, ಚಂಡೀಗಢ ಹಾಗೂ ಇತರ ಪ್ರದೇಶಗಳಲ್ಲಿ ದೊಡ್ಡ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿದ್ದರು. ಅವರ ಪತ್ನಿ, ಇಬ್ಬರು ಪುತ್ರಿಯರು, ಒಬ್ಬ ಪುತ್ರ, ಚಾಲಕ ಹಾಗೂ ಆರು ಮಂದಿ ಇತರರನ್ನು ಈಗಾಗಲೇ ಆಸ್ಪತ್ರೆಯ ಐಸೊಲೇಶನ್ ವಾರ್ಡ್‍ನಲ್ಲಿರಿಸಲಾಗಿದೆ.

ಮತ್ತಷ್ಟು ಸುದ್ದಿಗಳು

Latest News

ಒಮಿಕ್ರೋನ್ ಭೀತಿ: ಭಾರತಕ್ಕೆ ಆಗಮಿಸುವ ವಿದೇಶಿ ಪ್ರಯಾಣಿಕರಿಗೆ ಮಾರ್ಗಸೂಚಿ ಬಿಡುಗಡೆ

newsics.com ನವದೆಹಲಿ: ಭಾರತಕ್ಕೆ ಆಗಮಿಸುವ ವಿದೇಶಿ ಪ್ರಯಾಣಿಕರಿಗೆ ಹೊಸ ಮಾರ್ಗಸೂಚಿಗಳನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಒಮಿಕ್ರೋನ್ ಹರಡುವ ಭೀತಿಯ ನಡುವೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ...

ರಾಜ್ಯದ 58 ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ಘೋಷಣೆ

newsics.com ಬೆಂಗಳೂರು: ರಾಜ್ಯದ 58 ನಗರ ಸ್ಥಳೀಯ ಸಂಸ್ಥೆಗಳಿಗೆ ರಾಜ್ಯ ಚುನಾವಣಾ ಆಯೋಗ ಚುನಾವಣೆ ಘೋಷಣೆ ಮಾಡಿದೆ. ಡಿಸೆಂಬರ್ 27ರಂದು ಮತದಾನ ನಡೆಯಲಿದ್ದು, ಡಿಸೆಂಬರ್ 30ರಂದು ಮತ ಎಣಿಕೆ ಕಾರ್ಯ ನಡೆಯಲಿದೆ. 5 ನಗರ ಸಭೆ,...

ಬಹುಕಾಲದ ಗೆಳತಿಯೊಂದಿಗೆ ಶಾರ್ದುಲ್ ಠಾಕೂರ್ ನಿಶ್ಚಿತಾರ್ಥ

newsics.com ಮುಂಬೈ: ಕ್ರಿಕೆಟಿಗ ಶಾರ್ದೂಲ್ ಠಾಕೂರ್ ತಮ್ಮ ಬಹುಕಾಲದ ಗೆಳತಿ ಮಿತ್ತಾಲಿ ಪಾರುಲ್ಕರ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಮುಂಬೈ ಕ್ರಿಕೆಟ್ ಅಸೋಸಿಯೇಷನ್ ನಲ್ಲಿ ಸರಳವಾಗಿ ನಡೆದ ಅವರ ನಿಶ್ಚಿತಾರ್ಥ ಸಮಾರಂಭದಲ್ಲಿ ಸುಮಾರು 75 ಜನರು ಭಾಗವಹಿಸಿದ್ದರು...
- Advertisement -
error: Content is protected !!