newsics.com
ನ್ಯೂಯಾರ್ಕ್: ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂದು ಆರೋಪಿಸಿರುವ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ವಿರುದ್ಧ ಶ್ರೀಲಂಕಾದ ವಿದೇಶಾಂಗ ಸಚಿವ ಅಲಿ ಸಬ್ರಿ ಕಿಡಿಕಾರಿದ್ದಾರೆ.
ಭಾರತದ ಪರ ನಿಂತಿರುವ ಸಚಿವ ಸಬ್ರಿ, ಕೆನಡಾದಲ್ಲಿ ಭಯೋತ್ಪಾದಕರು ಸುರಕ್ಷಿತ ನೆಲೆ ಕಂಡುಕೊಂಡಿದ್ದಾರೆ. ಕೆನಡಾದ ಪ್ರಧಾನಿ ಯಾವುದೇ ಸಾಕ್ಷ್ಯವಿಲ್ಲದೆ ಭಾರತದ ವಿರುದ್ಧ ಅವಹೇಳನಕಾರಿ ಆರೋಪಗಳನ್ನು ಮಾಡಿದ್ದಾರೆ ಎಂದು ಟೀಕಿಸಿದರು.
ಈ ಹಿಂದೆ ಕೆನಡಾ, ಶ್ರೀಲಂಕಾದ ವಿರುದ್ಧ ಆಧಾರರಹಿತ ಆರೋಪವನ್ನು ಮಾಡಿತ್ತು. ನಮ್ಮ ದೇಶದಲ್ಲಿ ಯಾವುದೇ ನರಮೇಧ ನಡೆದಿಲ್ಲ ಎಂದು ಎಲ್ಲರಿಗೂ ತಿಳಿದಿದೆ ಎಂದರು.
ಬಂದ್ ಭದ್ರತೆಯಲ್ಲಿರುವ ಪೊಲೀಸರಿಗೆ ಇಲಿ ಸತ್ತು ಬಿದ್ದಿರುವ ಆಹಾರ ಪೂರೈಕೆ