Tuesday, April 13, 2021

ನೂರಾರು ಬೀದಿನಾಯಿಗಳಿಗೆ ಅನ್ನದಾತ ಈತ!

ಬ್ಬೊಬ್ಬರಿಗೆ ಒಂದೊಂದು ಬಗೆಯ ಕೆಲಸ ಇಷ್ಟ. ಹಾಗೆಯೇ ಕೆಲವರು ಬೆಕ್ಕನ್ನು ಮುದ್ದಿಸಿದರೆ ಇನ್ನೂ ಕೆಲವರು ನಾಯಿಗಳನ್ನು ಇಷ್ಟಪಡುತ್ತಾರೆ. ಆದರೆ ಇವರಿಗೆ ಬೀದಿ ನಾಯಿಗಳೆಂದರೆ ಪಂಚಪ್ರಾಣ. ಇದಕ್ಕಾಗಿ ಅವರು ಸಾಕಷ್ಟು ಖರ್ಚನ್ನೂ ಮಾಡುತ್ತಾ ಅದರಲ್ಲೇ ತೃಪ್ತಿ ಕಾಣುತ್ತಿದ್ದಾರೆ.
ಅದು ಲಾಕ್ ಡೌನ್ ಸಮಯ. ಯಾರಿಗೂ ಆಹಾರ ಸಿಗದ ಸ್ಥಿತಿ. ಮನುಷ್ಯರ ಪಾಡೇ ಹೀಗಾದರೆ ಪ್ರಾಣಿಗಳ ಪಾಡು. ಅದರಲ್ಲೂ ಬೀದಿ ನಾಯಿಗಳದು? ನಿಜಕ್ಕೂ ನಾಯಿಪಾಡೇ.
ಹಲವರು ಸಂಕಷ್ಟದಲ್ಲಿರುವವರಿಗೆ ಆಹಾರ, ದಿನಸಿ ಕಿಟ್ ನೀಡಿದರು. ಕೆಲವರು ಪ್ರಾಣಿಗಳಿಗೂ ಆಹಾರ ನೀಡಿದರು. ಆದರೆ ನೋಯ್ಡಾದ ವಿದಿತ್ ಶರ್ಮಾ 700 ನಾಯಿಗಳಿಗೆ ಮತ್ತು 45 ಮರಿಗಳಿಗೆ ನಗರದ ವಿವಿಧ ಪ್ರದೇಶಗಳಿಗೆ ತೆರಳಿ ಆಹಾರ ನೀಡಿದ್ದಾರೆ. ಇವರ ಕಾರ್ಯ ಜನಮೆಚ್ಚುಗೆ ಪಡೆದಿದ್ದು, ವಿದಿತ್ ಶರ್ಮಾಗೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.
‘ನಾನು ನಾಲ್ಕು ವರ್ಷಗಳಿಂದಲೂ ಬೀದಿ ನಾಯಿಗಳಿಗೆ ಆಹಾರ ನೀಡುತ್ತಿದ್ದೇನೆ. ಲಾಕ್ ಡೌನ್ ವೇಳೆ ನನ್ನ ಕಚೇರಿ ಮುಚ್ಚಲಾಗಿತ್ತು, ಅದರಿಂದ ನಾನು ಹೆಚ್ಚಿನ ನಾಯಿಗಳಿಗೆ ಆಹಾರ ವಿತರಿಸಲು ಆರಂಭಿಸಿದೆ’ ವಿದಿತ್ ಶರ್ಮಾ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.
100 ಕೆಜಿ ಅನ್ನ, ಸೋಯಾಬಿನ್, 200 ಮೊಟ್ಟೆ ಬೆರೆಸಿ ಅದನ್ನು ನಾಯಿಗೆ ದಿನಕ್ಕೆ ಎರಡು ಬಾರಿ ನೀಡಿದ್ದರಂತೆ. ಹಾಗೆ ಆಹಾರ ಸಾಗಿಸಲು ರಿಕ್ಷಾ ಎಳೆಯುವವರನ್ನು ನೇಮಿಸಿಕೊಂಡಿದ್ದಾಗಿ ಹೇಳಿದ್ದಾರೆ.
ಇವರ ಬೀದಿನಾಯಿ ಪ್ರೇಮ ಆಹಾರ ಕೊಡುವುದಕ್ಕಷ್ಟೇ ಸೀಮಿತವಾಗಿಲ್ಲ. ರಾತ್ರಿ ವೇಳೆ ವಾಹನಗಳಿಗೆ ಸಿಲುಕಿ ತೊಂದರೆಗೆ ಒಳಗಾಗಬಾರದು ಎಂಬ ಕಾರಣಕ್ಕೆ ಬೀದಿ ನಾಯಿಗಳಿಗೆ ರೇಡಿಯಮ್ ಕಾಲರ್ ಜೋಡಿಸಲು ಮುಂದಾಗಿದ್ದಾರೆ. ಈಗಾಗಲೇ 60 ಕಾಲರ್ ಗಳನ್ನು ಅಳವಡಿಸಿದ್ದಾರೆ. 1000 ಕಾಲರ್ ಖರೀದಿಸಿ ಇನ್ನಷ್ಟು ಬೀದಿನಾಯಿಗಳ ಸುರಕ್ಷತೆಗೆ ಪಣ ತೊಟ್ಟಿದ್ದಾರೆ. ಇದಕ್ಕಾಗಿ ಲಕ್ಷಾಂತರ ರೂ.ಗಳನ್ನು ವೆಚ್ಚ ಮಾಡುತ್ತಿದ್ದಾರೆ. ಸ್ವಾರ್ಥಿಗಳೇ ತುಂಬಿರುವ ಸಮಾಜದಲ್ಲಿ ಇಂಥವರು ಮಾದರಿಯಾಗುತ್ತಾರೆ.

ಮತ್ತಷ್ಟು ಸುದ್ದಿಗಳು

Latest News

ಕುರಾನ್’ನಲ್ಲಿನ 26 ವಚನ ತೆಗೆಯಬೇಕೆಂಬ ಅರ್ಜಿ ವಜಾಗೊಳಿಸಿದ ಸುಪ್ರೀಂ

newsics.comನವದೆಹಲಿ: ಕುರಾನ್‌ನಲ್ಲಿನ 26 ವಚನಗಳನ್ನು ತೆಗೆಯುವಂತೆ ಕೋರಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.ಅರ್ಜಿಯು ಗಂಭೀರ ಉದ್ದೇಶ ಹೊಂದಿಲ್ಲ ಎಂಬ ಕಾರಣಕ್ಕೆ ಅರ್ಜಿದಾರರಿಗೆ 50...

ದೋಣಿ ಮುಳುಗಿ 34 ವಲಸಿಗರ ಸಾವು

newsics.comಜಿಬೂಟಿ: ವಲಸಿಗರನ್ನು ಹೊತ್ತ ದೋಣಿಯೊಂದು ಸಮುದ್ರದಲ್ಲಿ ಮುಳುಗಿ 34 ಮಂದಿ ಮೃತಪಟ್ಟಿದ್ದಾರೆ.ಆಫ್ರಿಕಾ ಖಂಡದ ಜಿಬೂಟಿ ದೇಶದ ಕರಾವಳಿಗೆ ಹೊಂದಿಕೊಂಡ ಪ್ರದೇಶದಲ್ಲಿ ಈ ದುರಂತ ಸಂಭವಿಸಿದೆ ಎಂದು ಅಂತಾರಾಷ್ಟ್ರೀಯ ವಲಸಿಗರ ಸಂಘಟನೆ...

ಮಹಾರಾಷ್ಟ್ರದಲ್ಲಿ 51,751 ಮಂದಿಗೆ ಕೊರೋನಾ ಸೋಂಕು 258 ಜನ‌ ಸಾವು

newsics.comಮುಂಬೈ: ಮಹಾರಾಷ್ಟ್ರದಲ್ಲಿ ಕಳೆದ 24 ಗಂಟೆಯಲ್ಲಿ 51,751 ಮಂದಿಗೆ ಕೊರೋನಾ ಸೋಂಕು ತಗುಲಿದ್ದು, 258 ಮಂದಿ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ.ಪ್ರಯೋಗಾಲಯಕ್ಕೆ ಬಂದಿದ್ದ 2,33,22,393 ಸ್ಯಾಂಪಲ್‌ಗಳ ಪೈಕಿ 34,58,996 ಮಂದಿಗೆ ಕೊರೋನಾ...
- Advertisement -
error: Content is protected !!