ಲಖನೌ: ಮೂವತ್ತು ರೂ. ಲಂಚ ನೀಡದ ಕಾರಣಕ್ಕೆ ರೋಗಿಯೊಬ್ಬರಿಗೆ ಸೇವೆ ನೀಡದೆ ಉತ್ತರ ಪ್ರದೇಶದ ಸರ್ಕಾರಿ ಆಸ್ಪತ್ರೆಯೊಂದು ಅಮಾನವೀಯವಾಗಿ ವರ್ತಿಸಿದೆ.
30 ರೂ. ಲಂಚ ನೀಡದ ಕಾರಣಕ್ಕೆ ಸೇವೆ ನೀಡಲು ನಿರಾಕರಿಸಿದ್ದರಿಂದ ರೋಗಿಯ ಪುತ್ರಿ ಹಾಗೂ ಆರು ವರ್ಷದ ಮೊಮ್ಮಗ ಅವರನ್ನು ಸ್ಟ್ರೆಚರ್ನಲ್ಲಿ ತಳ್ಳಿಕೊಂಡು ಹೋಗುವ ಪರಿಸ್ಥಿತಿಯನ್ನು ಉತ್ತರ ಪ್ರದೇಶದ ಡಿಯೋರಿಯಾ ಜಿಲ್ಲೆಯ ಸರ್ಕಾರಿ ಆಸ್ಪತ್ರೆ ಸೃಷ್ಟಿಸಿದೆ.
ಹಲ್ಲೆಗೊಳಗಾಗಿ ತೀವ್ರ ಗಾಯಗೊಂಡಿದ್ದ ಜಿಲ್ಲೆಯ ಗೌರ ಗ್ರಾಮದ ನಿವಾಸಿ ಚೆಡಿ ಯಾದವ್ ಎಂಬುವರನ್ನು ಬ್ಯಾಂಡೆಜ್ ಬದಲಿಸಲು ಅವರ ಆರು ವರ್ಷದ ಮೊಮ್ಮಗ ಸ್ಟ್ರೆಚರ್ನಲ್ಲಿ ತಳ್ಳಿಕೊಂಡು ಹೋಗಿದ್ದಾನೆ. ಬ್ಯಾಂಡೆಜ್ ಬದಲಿಸಲು ಡ್ರೆಸ್ಸಿಂಗ್ ರೂಮ್ಗೆ ಕರೆದುಕೊಂಡು ಹೋಗುವಂತೆ ಆಸ್ಪತ್ರೆ ಸಿಬ್ಬಂದಿ ಬಳಿ ಪುತ್ರಿ ಬಿಂದು ದೇವಿ ಮನವಿ ಮಾಡಿದಾಗ ಸಿಬ್ಬಂದಿ ₹ 30 ಕೇಳಿದ್ದಾರೆ. ‘ನಾನು ಬಡವಿ. ಪ್ರತಿದಿನ ಹಣ ನೀಡುವಷ್ಟು ಸಾಮರ್ಥ್ಯ ನನಗಿಲ್ಲ’ ಎಂದು ಬಿಂದು ತಿಳಿಸಿದ್ದಾರೆ.
‘ಎಷ್ಟೇ ಮನವಿ ಮಾಡಿದರೂ, ಸಿಬ್ಬಂದಿ ಮನಸ್ಸು ಕರಗಲಿಲ್ಲ. ಕೊನೆಗೆ ವಿಧಿಯಿಲ್ಲದೇ, ನಾನು ಮತ್ತು ನನ್ನ ಆರು ವರ್ಷದ ಮಗ ಕರೆದುಕೊಂಡು ಹೋದೆವು. ಅವನು ಸ್ಟ್ರೆಚರ್ನನ್ನು ಹಿಂದಿನಿಂದ ನೂಕಿದ, ನಾನು ಮುಂದೆ ಎಳೆದುಕೊಂಡು ಹೋದೆ’ ಎಂದು ಬಿಂದು ತಿಳಿಸಿದ್ದಾರೆ. ಈ ವಿಡಿಯೊವನ್ನು ಟ್ವಿಟರ್ನಲ್ಲಿ ಹಂಚಿಕೊಂಡಿರುವ ಸ್ಥಳೀಯ ಕಾಂಗ್ರೆಸ್ ಹಂಚಿಕೊಂಡಿದೆ.
https://twitter.com/i/status/1284915123031650305