newsics.com
ಅಬುಧಾಬಿ: ಸನ್ ರೈಸರ್ಸ್ ಹೈದ್ರಾಬಾದ್ ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ 15 ರನ್’ಗಳ ಜಯ ಸಂಪಾದಿಸಿದೆ.
ಸ್ಪಿನ್ನರ್ ರಶೀದ್ ಖಾನ್ (14ಕ್ಕೆ 3) ಮತ್ತು ವೇಗಿ ಭುವನೇಶ್ವರ್ ಕುಮಾರ್ (25ಕ್ಕೆ 2) ಬಿಗಿ ಬೌಲಿಂಗ್ ದಾಳಿಯ ನೆರವಿನಿಂದ ಸನ್ರೈಸರ್ಸ್ ಹೈದರಾಬಾದ್ ತಂಡ ಅರಬ್ ರಾಷ್ಟ್ರದಲ್ಲಿ ನಡೆಯುತ್ತಿರುವ ಐಪಿಎಲ್ 13ನೇ ಆವೃತ್ತಿಯಲ್ಲಿ ಕೊನೆಯ ತಂಡವಾಗಿ ಗೆಲುವಿನ ಖಾತೆ ತೆರೆದಿದೆ.
ಸನ್ ರೈಸರ್ಸ್ ಹೈದ್ರಾಬಾದ್ ನೀಡಿದ 163 ರನ್ ಸವಾಲನ್ನು ಬೆನ್ನಟ್ಟುವಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿಫಲವಾಯಿತು. ಧವನ್, ಪಂತ್, ಅಯ್ಯರ್, ಪೃಥ್ವೀ ಶಾ, ಹೈಟ್ಮೇರ್ ರಂತಹ ಸ್ಪೆಷಲಿಸ್ಟ್ ಬ್ಯಾಟ್ಸ್ ಮನ್ ಗಳನ್ನು ಹೊಂದಿದ್ದರೂ ಡೆಲ್ಲಿ ಪಡೆ ಹೈದ್ರಾಬಾದ್ ತಂಡದ ಶಿಸ್ತುಬದ್ಧ ಬೌಲಿಂಗ್ ಮತ್ತು ಉತ್ತಮ ಫೀಲ್ಡಿಂಗ್’ನಿಂದಾಗಿ 20 ಓವರ್ ಗಳಲ್ಲಿ 7 ವಿಕೆಟ್ ಗಳನ್ನು ಕಳೆದುಕೊಂಡು 147 ರನ್ ಗಳಷ್ಟನ್ನೇ ಪಡೆಯಿತು.163 ರನ್ ಗುರಿಯನ್ನು ಚೇಸ್ ಮಾಡಲಾರಂಭಿಸಿದ ಡೆಲ್ಲಿಗೆ ಗುರಿ ಮುಟ್ಟಲಾಗಲೇ ಇಲ್ಲ. 17 ರನ್ ಮಾಡಿದ ಕಪ್ತಾನ ಶ್ರೇಯಸ್ ಅಯ್ಯರ್ ಸಹ ಔಟಾದರು.
ಮುಗ್ಗರಿಸಿದ ಡೆಲ್ಲಿ ಕ್ಯಾಪಿಟಲ್ಸ್; ಸನ್ ರೈಸರ್ಸ್’ಗೆ ಜಯ
Follow Us