ನವದೆಹಲಿ: ಪ್ರಸಕ್ತ ಎದುರಾಗಿರುವ ಬಿಕ್ಕಟ್ಟನ್ನು ಬಗೆ ಹರಿಸಲು ಸಾಧ್ಯವಿದೆ. ಆರೋಗ್ಯ ಪೂರ್ಣ ಪ್ರಜಾಪ್ರಭುತ್ವ ವ್ಯವಸ್ಥೆಗಾಗಿ ಸಮಾಲೋಚನೆ ನಡೆಸಲು ಮುಖ್ಯಮಂತ್ರಿಗಳು ಕೂಡ ಸಿದ್ದರಾಗಿರುತ್ತಾರೆ. ಆದರೆ ಕೆಲವು ಸಂಘರ್ಷಕ್ಕೆ ಬಿಜೆಪಿ ಕೂಡ ಹೊಣೆಯಾಗಿದೆ. ಮುಖ್ಯವಾಗಿ ಏಕಪಕ್ಷೀಯ ನಿರ್ಧಾರ. ಅದರಲ್ಲೂ ಕೇಂದ್ರೀಕೃತ ನಿರ್ಧಾರದಿಂದಾಗಿ ಸಂಘರ್ಷ ಏರ್ಪಟ್ಟಿದೆ ಎಂದು ಸುಬ್ರಹ್ಮಣ್ಯಂ ಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ. ಪಕ್ಷದ ಅಧ್ಯಕ್ಷರ ಬದಲಾವಣೆಯೊಂದಿಗೆ ಈ ಸಂಸ್ಕೃತಿ ಕೂಡ ಬದಲಾಗುವ ಆಶಾವಾದವನ್ನು ಸುಬ್ರಹ್ಮಣ್ಯಂ ಸ್ವಾಮಿ ವ್ಯಕ್ತಪಡಿಸಿದ್ದಾರೆ.