ನವದೆಹಲಿ: ಬೆಂಗಳೂರಿನಲ್ಲಿ ಉಪ ನಗರ ರೈಲು ವ್ಯವಸ್ಥೆ ಜಾರಿಗೊಳಿಸುವ ಸಂಬಂಧ ಕೇಂದ್ರ ಸರ್ಕಾರ 18,600 ಕೋಟಿ ರೂಪಾಯಿಗಳ ಯೋಜನೆ ಪ್ರಕಟಿಸಿದೆ. ಬೆಂಗಳೂರಿನಲ್ಲಿ ವಾಹನ ದಟ್ಟಣೆ ನಿವಾರಿಸುವಲ್ಲಿ ಇದು ಮಹತ್ವದ ಪಾತ್ರ ವಹಿಸಲಿದೆ. ಇದೇ ವೇಳೆ ಉಡಾಣ್ ಮಾದರಿಯ ವಾಯುಯಾನ ಸೇವೆಯನ್ನು ಬಲಪಡಿಸಲು 2024ರೊಳಗೆ ದೇಶಾದ್ಯಂತ 100 ವಿಮಾನ ನಿಲ್ದಾಣಗಳನ್ನು ನಿರ್ಮಿಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ ಎಂದು ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್, ಮುಂಗಡ ಪತ್ರ ಮಂಡನೆಯ ಸಂದರ್ಭದಲ್ಲಿ ಘೋಷಿಸಿದ್ದಾರೆ.