Friday, September 30, 2022

ವ್ಯಕ್ತಿಯ ಹೊಟ್ಟೆಯಲ್ಲಿ 100 ಗ್ರಾಂ ಪ್ಲಾಸ್ಟಿಕ್: ಯಶಸ್ವಿಯಾಗಿ ಹೊರತೆಗೆದ ವೈದ್ಯಲೋಕ

Follow Us

newsics.com

ಬೋಲ್​ಪುರ(ಪಶ್ಚಿಮ ಬಂಗಾಳ): ಮನುಷ್ಯನ ಹೊಟ್ಟೆಯಲ್ಲಿ ಕರಳು, ಜಠರ ಇರುತ್ತವೆ. ಪ್ಲಾಸ್ಟಿಕ್​, ಪೈಪ್​ ಇರೋದು ಅಸಾಧ್ಯ. ವಿಚಿತ್ರ ಅಂದರೆ ಪಶ್ಚಿಮಬಂಗಾಳದ ವ್ಯಕ್ತಿಯೊಬ್ಬನ ಹೊಟ್ಟೆಯಲ್ಲಿ 100 ಗ್ರಾಂ ಪ್ಲಾಸ್ಟಿಕ್​ ಮತ್ತು 3 ಅಡಿ ಉದ್ದದ ಪೈಪ್​ ಅನ್ನು ವೈದ್ಯರು ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿ ಹೊರತೆಗೆದ ಘಟನೆ ನಡೆದಿದೆ.

ಬೋಲ್​ಪುರ ಉಪವಿಭಾಗೀಯ ಆಸ್ಪತ್ರೆಯಲ್ಲಿ ಹೊಟ್ಟೆ ನೋವೆಂದು ಚಿಕಿತ್ಸೆಗೆ ದಾಖಲಾದ ವ್ಯಕ್ತಿಯನ್ನು ತಪಾಸಣೆ ಮಾಡಿದಾಗ ಹೊಟ್ಟೆಯಲ್ಲಿ ಏನೋ ತುಂಬಿಕೊಂಡಂತೆ ಕಂಡುಬಂದಿದೆ. ಈ ವೇಳೆ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರೇ ಅಚ್ಚರಿ ಪಡುವಂತೆ 100 ಗ್ರಾಂ ಪ್ಲಾಸ್ಟಿಕ್​ ಹೊಟ್ಟೆಯಲ್ಲಿ ಕಂಡು ಬಂದಿದೆ. ಇದಲ್ಲದೇ, ಕಲ್ಮಶಗಳಿಂದ ಕೂಡಿದ 3 ಅಡಿ ಉದ್ದ 3 ಇಂಚು ದಪ್ಪ ಇರುವ ಪೈಪ್​ನಂತೆ ಕಂಡು ಬಂದ ವಸ್ತುವನ್ನೂ ಕೂಡ ಹೊಟ್ಟೆಯಿಂದ ತೆಗೆಯಲಾಗಿದೆ.

ಪ್ರವಾದಿ ಮಹಮ್ಮದ್ ಗೆ ಅವಮಾನ: ಗಲ್ಫ್ ದೇಶಗಳಲ್ಲಿ ತೀವ್ರ ಆಕ್ರೋಶ

 

ವೈದ್ಯಕೀಯ ಪರಿಭಾಷೆಯಲ್ಲಿ ಇದನ್ನು ‘ನೆಕ್ರೋಟಿಕ್ ಸಿಗ್ಮೋಯ್ಡ್ ವೋಲ್ವೋಲಾಸ್’ ಎಂದು ಕರೆಯುತ್ತಾರೆ. ಹೊಟ್ಟೆಯೊಳಗೆ ಗ್ಯಾಸ್ ಫ್ಲೂಯಿಡ್​ನಿಂದ ತುಂಬಿದ 3 ಅಡಿ ಉದ್ದ ಮತ್ತು 6 ಇಂಚು ಅಗಲದ ಪೈಪ್‌ನಂತಿದ್ದ ಕಲ್ಮಶವನ್ನು ತೆಗೆಯಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿಗಳು

vertical

Latest News

ವಂದೇ ಭಾರತ್ ಪ್ರಯಾಣ ಮಾಡಿದ್ರೆ ವಿಮಾನಕ್ಕಿಂತ ರೈಲಿಗೆ ಆದ್ಯತೆ ನೀಡುತ್ತಾರೆ: ಮೋದಿ

newsics.com ಗಾಂಧಿನಗರ: ಒಮ್ಮೆ ವಂದೇ ಭಾರತ್ ರೈಲಿನಲ್ಲಿ ಪ್ರಯಾಣಿಸಿದರೆ ವಿಮಾನದಲ್ಲಿ ಪ್ರಯಾಣಿಸುವುದನ್ನೇ ಜನರು ನಿಲ್ಲಿಸುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಗಾಂಧಿನಗರದ ರೈಲು ನಿಲ್ದಾಣದಲ್ಲಿ ಹೊಸ ವಂದೇ...

ಕಲಾ ವಿಮರ್ಶಕ ಮೈಸೂರು ವಿ. ಸುಬ್ರಹ್ಮಣ್ಯ ಇನ್ನಿಲ್ಲ

newsics.com ಮೈಸೂರು: ಖ್ಯಾತ ಕಲಾ ವಿಮರ್ಶಕ ಮೈಸೂರು ವಿ. ಸುಬ್ರಹ್ಮಣ್ಯ ಶುಕ್ರವಾರ ನಿಧನರಾದರು. ವೀಣೆ ಶೇಷಣ್ಣ ಅವರ ವಂಶದಲ್ಲಿ ಜನಿಸಿದ್ದ ಮೈಸೂರು ವಿ. ಸುಬ್ರಹ್ಮಣ್ಯ ಅವರು ಸಹಜವಾಗಿಯೇ ಸಂಗೀತಾಸಕ್ತಿ ಹೊಂದಿದ್ದರು. ಮೈಸೂರು ವಿ. ಸುಬ್ರಹ್ಮಣ್ಯ ಅವರ...

ಬೆಕ್ಕು ಕಚ್ಚಿದೆ ಎಂದು ಚಿಕಿತ್ಸೆಗೆ ಹೋದ್ರೆ ಬೀದಿ ನಾಯಿಯೂ ಕಚ್ಚಿತು!

newsics.com ಕೇರಳ: ಬೆಕ್ಕು ಕಚ್ಚಿದ್ದರಿಂದ ಆ್ಯಂಟಿ ರೇಬಿಸ್ ಲಸಿಕೆ ಹಾಕಿಸಿಕೊಳ್ಳಲು ಹೋಗಿದ್ದ ಮಹಿಳೆಯೊಬ್ಬರಿಗೆ ಆರೋಗ್ಯ ಕೇಂದ್ರದಲ್ಲೇ ಬೀದಿ ನಾಯಿಯೊಂದು ಕಚ್ಚಿದೆ. ಕೇರಳದ ತಿರುವನಂತಪುರಂನಲ್ಲಿ ಈ ಘಟನೆ ನಡೆದಿದೆ. ವಿಜಿಂಜಂ ಸಮುದಾಯ ಆರೋಗ್ಯ ಕೇಂದ್ರಕ್ಕೆ ಗುರುವಾರ ಬೆಳಗ್ಗೆ...
- Advertisement -
error: Content is protected !!