ತಿರುವನಂತಪುರಂ: ಕೊರೋನಾ ಹಿನ್ನೆಲೆಯಲ್ಲಿ ಮಕ್ಕಳ ಮಾನಸಿಕ ಆರೋಗ್ಯಕ್ಕೆ ಆದ್ಯತೆ ನೀಡಲು ಕೇರಳ ಸರ್ಕಾರ ನಿರ್ಧರಿಸಿದೆ.
ಕೊರೋನಾ ಲಾಕ್ಡೌನ್ ವೇಳೆಯಲ್ಲಿ ಕೇರಳದಲ್ಲಿ 66 ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾದ ಹಿನ್ನೆಲೆಯಲ್ಲಿ ಕೇರಳ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ ಎಂದು ಮೂಲಗಳು ತಿಳಿಸಿವೆ.
ಕೊರೋನಾ ಸೋಂಕಿತರ ಸಾವು ತಡೆಯಲು ‘ಪ್ಲಾಸ್ಮಾ ಥೆರಪಿ’ ಪರಿಣಾಮಕಾರಿ
ಕೊರೋನಾ ಲಾಕ್ ಡೌನ್ ಪರಿಸ್ಥಿತಿ ಮಕ್ಕಳ ಮನಸ್ಥಿತಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. 66 ಆತ್ಮಹತ್ಯೆ ಪ್ರಕರಣಗಳಲ್ಲಿ ಮೊಬೈಲ್ ಗೇಮ್ ಆಡಿದ್ದಕ್ಕೆ ಅಥವಾ ಆನ್ಲೈನ್ ತರಗತಿ ತಪ್ಪಿಸಿಕೊಂಡಿದ್ದಕ್ಕೆ ಮನೆಯವರು ಆಕ್ಷೇಪಿಸಿದ ಕ್ಷುಲ್ಲಕ ಕಾರಣಗಳೂ ಇವೆ. ಈ ಹಿನ್ನೆಲೆಯಲ್ಲಿ ಡಿಜಿಪಿ ಮಟ್ಟದ ಅಧಿಕಾರಿ ನೇತೃತ್ವದಲ್ಲಿ ಸತ್ಯಶೋಧನಾ ಸಮಿತಿ ರಚಿಸಲಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.
12ರಿಂದ 18 ವರ್ಷದವರೆ ಆತ್ಮಹತ್ಯೆ ಮಾಡಿಕೊಂಡವರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಎಲ್ಲಾ ಆತ್ಮಹತ್ಯೆ ಪ್ರಕರಣಗಳಿಗೂ ಲಾಕ್ಡೌನ್ ಕಾರಣವಾಗಿಲ್ಲ. ಮನೆಯಲ್ಲಿ ಜಗಳ, ಹೆತ್ತವರ ಒತ್ತಡ ಅಥವಾ ನಿರ್ಲಕ್ಷ್ಯ, ನಿಂದನೆ ಮುಂತಾದ ಕಾರಣಗಳೂ ಇವೆ. ಮಕ್ಕಳನ್ನು ಈ ಪರಿಸ್ಥಿತಿಯಿಂದ ಹೊರತಂದು ಮಕ್ಕಳ ಮಾನಸಿಕ ಮತ್ತು ಭಾವನಾತ್ಮಕ ಯೋಗಕ್ಷೇಮ ಕಾಪಾಡುವ ನಿಟ್ಟಿನಲ್ಲಿ ಹಲವು ಉಪಕ್ರಮಗಳನ್ನು ರಾಜ್ಯದಲ್ಲಿ ಆರಂಭಿಸಲಾಗಿದೆ ಎಂದು ಸಿಎಂ ವಿಜಯನ್ ತಿಳಿಸಿದ್ದಾರೆ.