Monday, April 12, 2021

ಕೊರೋನಾದಿಂದ ಮುಕ್ತಿ: ತಿರುಪತಿಯಲ್ಲಿ ವೇದ ಪಂಡಿತರಿಂದ ಸುಂದರಕಾಂಡ ಶ್ಲೋಕ ಪಠಣ

ತಿರುಪತಿ: ಮಾರಕ ಕೊರೋನಾದಿಂದ ವಿಶ್ವಕ್ಕೆ ಶೀಘ್ರವೇ ಮುಕ್ತಿ ದೊರೆಯಲಿ ಎಂದು ಹಾರೈಸಿ ತಿರುಪತಿ ತಿರುಮಲ ದೇವಸ್ಥಾನದಲ್ಲಿ 250 ವೇದ ಪಂಡಿತರು ಸುಂದರ ಕಾಂಡದ ಶ್ಲೋಕ ಪಠಿಸಿದರು. ಸುಂದರ ಕಾಂಡದ ಮೊದಲ ಅಧ್ಯಾಯದ 211 ಶ್ಲೋಕಗಳನ್ನು ಏಕಕಾಲದಲ್ಲಿ ಪಠಿಸಿದರು.

ಧರ್ಮಗಿರಿ ವೇದಪಾಠ ಶಾಲಾ, ಎಸ್ . ವಿ. ವೇದಿಕ್ ವಿಶ್ವವಿದ್ಯಾಲಯ ಮತ್ತು ರಾಷ್ಟ್ರೀಯ  ವಿದ್ಯಾ ಪೀಠದ ವೇದ ಪಂಡಿತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.  ಹನುಮಂತ ಎಲ್ಲ ಅಡೆ ತಡೆಗಳನ್ನು ನಿವಾರಿಸಿ ಲಂಕಾಕ್ಕೆ ತೆರಳಿ ಸೀತಾ ಮಾತೆಯ ದರ್ಶನ ಪಡೆಯುವ ಕಥೆಯನ್ನು ಸುಂದರಕಾಂಡದ ಮೊದಲ ಅಧ್ಯಾಯ ಹೊಂದಿದೆ. ಹನುಮಂತ ಎಲ್ಲ ಅಡೆತಡೆಗಳನ್ನು ನಿವಾರಿಸಿದಂತೆ ವಿಶ್ವಕ್ಕೆ ಎದುರಾಗಿರುವ ಕೊರೋನಾ ಕೂಡ ದೂರವಾಗಲಿ ಎಂಬ ಸಂಕಲ್ಪದೊಂದಿಗೆ ಈ ಶ್ಲೋಕ ಪಠಣ ನಡೆಸಲಾಯಿತು.

ಇದೇ ಸಂದರ್ಭದಲ್ಲಿ ವೆಂಕಟೇಶ್ವರ ಮತ್ತು ಹನುಮಂತನಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ಮತ್ತಷ್ಟು ಸುದ್ದಿಗಳು

Latest News

4 ಕೋಟಿ ರೂಪಾಯಿ ಹಣದೊಂದಿಗೆ ಪರಾರಿಯಾದ ಸೆಕ್ಯೂರಿಟಿ ಗಾರ್ಡ್

newsics.com ಚಂಢೀಗಢ: ಪಂಜಾಬಿನ ಚಂಢೀಗಢದಲ್ಲಿ ಬ್ಯಾಂಕ್ ಭದ್ರತಾ ಸಿಬ್ಬಂದಿಯೊಬ್ಬರು 4 ಕೋಟಿ 4 ಲಕ್ಷ ರೂಪಾಯಿ ಜತೆ ಪರಾರಿಯಾಗಿದ್ದಾರೆ. ಸೆಕ್ಟರ್ 34 ಎ ಯಲ್ಲಿ ಈ ಪ್ರಕರಣ...

ಅಪ್ರಾಪ್ತ ಬಾಲಕಿಗೆ ಚುಂಬನ: ಯುವಕನಿಗೆ ಒಂದು ವರ್ಷ ಜೈಲು

newsics.comಮುಂಬೈ: ಅಪ್ರಾಪ್ತ ಬಾಲಕಿಗೆ ಕಣ್ಣು ಹೊಡೆದಿದ್ದಲ್ಲದೆ ಚುಂಬಿಸಿದ್ದಕ್ಕಾಗಿ 20 ವರ್ಷದ ಯುವಕನಿಗೆ ಒಂದು ವರ್ಷ ಜೈಲು ಶಿಕ್ಷೆ ಹಾಗೂ 15 ಸಾವಿರ ರೂ. ದಂಡ ವಿಧಿಸಿ  ಮುಂಬೈ ವಿಶೇಷ ನ್ಯಾಯಾಲಯ...

ಏಕಲವ್ಯ ಪ್ರಶಸ್ತಿ ಪುರಸ್ಕೃತ ಕ್ರೀಡಾಪಟು ಶಿಲ್ಪಾ ಆತ್ಮಹತ್ಯೆ

newsics.comಬೆಂಗಳೂರು: ಏಕಲವ್ಯ ಪ್ರಶಸ್ತಿ ಪುರಸ್ಕೃತ ಕ್ರೀಡಾಪಟು ಶಿಲ್ಪಾ(41) ಆತ್ಮಹತ್ಯೆಗೆ ಶರಣಾಗಿದ್ದಾರೆ.ತಾಯಿಯ ಸಾವು, ಮಕ್ಕಳಿಲ್ಲವೆಂಬ, ಉದ್ಯೋಗವಿರಲಿಲ್ಲವೆಂಬ ಆತಂಕದಿಂದ ಮಾನಸಿಕ‌ ಖಿನ್ನತೆಗೊಳಗಾಗಿದ್ದ ಶಿಲ್ಪಾ ಡೆತ್ ನೋಟ್ ಬರೆದಿಟ್ಟು ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ...
- Advertisement -
error: Content is protected !!