Tuesday, April 13, 2021

ವಲಸಿಗ ಕಾರ್ಮಿಕರನ್ನು 15 ದಿನಗಳಲ್ಲಿ ಊರಿಗೆ ಕಳುಹಿಸಿ: ಸುಪ್ರೀಂ ಆದೇಶ

ನವದೆಹಲಿ:  ಲಾಕ್ ಡೌನ್ ಹಿನ್ನೆಲೆಯಲ್ಲಿ ಸಂಕಷ್ಟ ಎದುರಿಸುತ್ತಿರುವ ಎಲ್ಲ ವಲಸಿಗ ಕಾರ್ಮಿಕರನ್ನು 15 ದಿನಗಳ ಒಳಗೆ ಅವರ ಊರಿಗೆ ಕಳುಹಿಸುವ ವ್ಯವಸ್ಥೆ ಮಾಡುವಂತೆ ಸುಪ್ರೀಂ ಕೋರ್ಟ್ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಆದೇಶ ನೀಡಿದೆ. ವಲಸಿಗ ಕಾರ್ಮಿಕರ ವಿರುದ್ದ ದಾಖಲಾಗಿರುವ ಎಲ್ಲ ಪ್ರಕರಣ ಹಿಂತೆಗೆಯಬೇಕು ಮತ್ತು ಅವರು ಊರಿಗೆ ಮರಳಲು ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದು  ರಾಜ್ಯ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಎಲ್ಲ ವಲಸಿಗ ಕಾರ್ಮಿಕರ ನೋಂದಾವಣೆಗೆ ಕ್ರಮ ಕೈಗೊಳ್ಳುವಂತೆಯೂ ಸುಪ್ರೀಂ ಕೋರ್ಟ್ ಸೂಚಿಸಿದೆ. ಈ ಮಧ್ಯೆ ವಲಸಿಗ ಕಾರ್ಮಿಕರ ಸಂಚಾರಕ್ಕೆ ಹೆಚ್ಚುವರಿ ರೈಲು ಓಡಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ. ಈ ಸಂಬಂಧ ಅಗತ್ಯ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಕೇಂದ್ರ ಸರ್ಕಾರದ ಮೂಲಗಳು ಹೇಳಿವೆ.

ಮತ್ತಷ್ಟು ಸುದ್ದಿಗಳು

Latest News

ಚಿಕಿತ್ಸೆ ನಿರಾಕರಿಸಿದ ಮಲ್ಯ ಆಸ್ಪತ್ರೆ, ಫುಟ್’ಪಾತ್’ನಲ್ಲೇ 8 ಗಂಟೆ ಕಳೆದ ಕೊರೋನಾ ಸೋಂಕಿತೆ

newsics.comಬೆಂಗಳೂರು: ಡಯಾಲಿಸಿಸ್‌ಗೆ ಬಂದ‌ ಮಹಿಳೆಗೆ ಕೊರೋನಾ ಸೋಂಕಿದೆ ಎಂದು ಮಲ್ಯ ಆಸ್ಪತ್ರೆ ಚಿಕಿತ್ಸೆ ನಿರಾಕರಿಸಿದ್ದರಿಂದ ಆ ಮಹಿಳೆ ಪುಟ್'ಪಾತ್'ನಲ್ಲೇ ಎಂಟು ಗಂಟೆ ಕಳೆದಿದ್ದಾರೆ.ಬಸವನಗುಡಿ...

ಮೀನುಗಾರಿಕಾ ಬೋಟ್ ದುರಂತ: ಇಬ್ಬರ ಸಾವು, 12 ಮೀನುಗಾರರು ನಾಪತ್ತೆ

newsics.comಮಂಗಳೂರು(ದಕ್ಷಿಣ ಕನ್ನಡ): ಮೀನುಗಾರಿಕಾ ಬೋಟ್ ದುರಂತದಲ್ಲಿ  ಇಬ್ಬರು ಸಾವನ್ನಪ್ಪಿದ್ದು, 12 ಮೀನುಗಾರರು ನಾಪತ್ತೆಯಾಗಿರುವ ಘಟನೆ ಮಂಗಳೂರು ಬಂದರಿನಲ್ಲಿ ನಡೆದಿದೆ.ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಬಂದರಿನಿಂದ 43 ನಾಟಿಕಲ್ ಮೈಲಿ ದೂರದಲ್ಲಿ...

ಭಾರತದಲ್ಲಿ ಈ ಬಾರಿ ಕೂಡ ಸಾಮಾನ್ಯ ಮುಂಗಾರು: ಸ್ಕೈಮೆಟ್ ಭವಿಷ್ಯ

newsics.com ಪುಣೆ: ಸತತ ಮೂರನೆ ವರ್ಷ ಕೂಡ ಭಾರತದಲ್ಲಿ  ಸಾಮಾನ್ಯ ಮುಂಗಾರು ಮಳೆ ಸುರಿಯಲಿದೆ ಎಂದು ಖಾಸಗಿ ಹವಾಮಾನ ಸಂಸ್ಥೆ ಸ್ಕೈ ಮೆಟ್ ಭವಿಷ್ಯ ನುಡಿದಿದೆ. ಜೂನ್ ನಿಂದ ಆರಂಭವಾಗಿ ಸೆಪ್ಟೆಂಬರ್ ತಿಂಗಳಲ್ಲಿ ಕೊನೆಗೊಳ್ಳುವ ಮುಂಗಾರು...
- Advertisement -
error: Content is protected !!