NEWSICS.COM
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹೊಗೆಮಿಶ್ರಿತ ಮಂಜಿನಿಂದ ಕೂಡಿದ ವಾತಾವರಣ ಉಂಟಾಗದಂತೆ ಗಮನಹರಿಸಲು ಸುಪ್ರೀಂ ಕೋರ್ಟ್ ಶುಕ್ರವಾರ (ನ.6) ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ.
ಸರ್ಕಾರದಿಂದ ನೇಮಿಸಲ್ಪಟ್ಟ ಸದಸ್ಯರಿಂದ ವಾಯುಗುಣ ಮಟ್ಟ ನಿರ್ವಹಣೆ ಆಯೋಗವು (ಎ ಕ್ಯೂಎಂ) ದೆಹಲಿಯಲ್ಲಿ ಕಾರ್ಯ ಆರಂಭಿಸಿದೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ನ್ಯಾಯ ಪೀಠಕ್ಕೆ ತಿಳಿಸಿದ್ದಾರೆ. ಇದಕ್ಕೆ ಉತ್ತರಿಸಿದ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬಡೆ ಹಾಗೂ ರಾಮಸುಬ್ರಮಣಿಯನ್ ಮತ್ತು ನ್ಯಾಯಮೂರ್ತಿ ಎ. ಎಸ್ ಬೋಪಣ್ಣ ಪೀಠ ಆಯೋಗದ ರಚನೆ ಬಗ್ಗೆ ಮಾಹಿತಿ ಬೇಕಿಲ್ಲ , ಹಲವು ತಜ್ಞರು ಅದಕ್ಕೆ ಕಾರ್ಯ ನಿರ್ವಹಿಸುತ್ತಿದ್ದಾರೆ. ನಗರವು ಮಂಜಿನ ವಾತಾವರಣದಿಂದ ಕೂಡದಂತೆ ಖಾತ್ರಿಪಡಿಸಿ ಎಂದು ತಿಳಿಸಿದೆ.