ನವದೆಹಲಿ: ಶಬರಿಮಲೆ ಅಯ್ಯಪ್ಪ ಸ್ವಾಮಿಯ ಪವಿತ್ರ ಚಿನ್ನಾಭರಣಗಳನ್ನು ಯಾಕಾಗಿ ಪಂದಳಂ ರಾಜಮನೆತನದವರ ಬಳಿ ಇಡುತ್ತಿದ್ದೀರಿ..ರಾಜ್ಯ ಸರ್ಕಾರ ಇದರ ಸುರಕ್ಷತೆ ಖಾತರಿಪಡಿಸಲು ಸಾಧ್ಯವಿಲ್ಲವೇ . ಇದು ಸುಪ್ರೀಂ ಕೋರ್ಟ್ ಕೇಳಿರುವ ಪ್ರಶ್ನೆ. ತಿರುವಾಭರಣ ಎಂದೇ ಪ್ರಸಿದ್ದಿಯಾಗಿರುವ ಅಯ್ಯಪ್ಪ ಸ್ವಾಮಿಗೆ ಸೇರಿದ ಚಿನ್ನಾಭರಣಗಳನ್ನು ಇದುವೆರೆಗೂ ಪಂದಳಂ ರಾಜ ಕುಟುಂಬ ರಕ್ಷಿಸುತ್ತಿದೆ. ಶಬರಿಮಲೆ ಮಕರ ಜ್ಯೋತಿ ಸಂದರ್ಭದಲ್ಲಿ ಈ ಆಭರಣಗಳನ್ನು ಅಯ್ಯಪ್ಪ ಸ್ವಾಮಿಗೆ ಅಲಂಕರಿಸಿದ ಬಳಿಕ ಮಹಾ ಪೂಜೆ ನೆರವೇರಿಸಲಾಗುತ್ತದೆ. ಈ ಸಂದರ್ಭದಲ್ಲಿ ಗರುಡ ದೇವಸ್ಥಾನಕ್ಕೆ ಸುತ್ತು ಬರುತ್ತದೆ ಮತ್ತು ಪವಿತ್ರ ಮಕರ ಜ್ಯೋತಿಯ ದರ್ಶನವಾಗುತ್ತದೆ H,X}�U�